September 8, 2024

ಕೇಂದ್ರ ಬಜೆಟ್ 2024-25: ಶಿಕ್ಷಣ, ಉದ್ಯೋಗ, ಕೌಶಲಾಭಿವೃದ್ಧಿ ಕ್ಷೇತ್ರಕ್ಕೆ 1.48 ಲಕ್ಷ ಕೋಟಿ ಮೀಸಲು

0

ನವದೆಹಲಿ: 2024-25ನೇ ಸಾಲಿನ ಆಯವ್ಯಯದಲ್ಲಿ ಶಿಕ್ಷಣ, ಉದ್ಯೋಗ ಮತ್ತು ಕೌಶಲಾಭಿವೃದ್ಧಿ ಕ್ಷೇತ್ರಕ್ಕೆ ₹1.48 ಲಕ್ಷ ಕೋಟಿ ಮೀಸಲಿಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಲೋಕಸಭೆಯಲ್ಲಿ ಬಜೆಟ್ ಮಂಡಿಸಿದ ಸಚಿವೆ, ಇದರಿಂದ ಉದ್ಯೋಗ, ಕೌಶಲಾಭಿವೃದ್ಧಿ, ಸೂಕ್ಷ್ಮ, ಸಣ್ಣ ಮತ್ತು ಉದ್ಯಮ (ಎಂಎಸ್‌ಎಂಇ) ಮತ್ತು ಮಧ್ಯಮ ವರ್ಗದವರಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದು ತಿಳಿಸಿದರು.

ಇದರ ಜತೆಗೆ ದೇಶದ 80 ಕೋಟಿ ಜನರಿಗೆ ಅನೂಕೂಲವಾಗಿರುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಐದು ವರ್ಷಗಳ ವಿಸ್ತರಿಸಲಾಗುವುದು ಎಂದರು.

ಈ ಹಿಂದೆ ಮಧ್ಯಂತರ ಬಜೆಟ್‌ನಲ್ಲಿ ಉಲ್ಲೇಖಿಸಿದಂತೆ ಬಡವರು, ಮಹಿಳೆಯರು, ಯುವಜನತೆ ಮತ್ತು ರೈತ ವರ್ಗದ ಮೇಲೆ ಹೆಚ್ಚು ಗಮನಹರಿಸಲಾಗುವುದು ಎಂದರು.

Leave a Reply

Your email address will not be published. Required fields are marked *

error: Content is protected !!