ದಕ್ಷಿಣ ಕನ್ನಡ: ವಾರದ ಬಳಿಕ ಕಾಣಿಸಿಕೊಂಡ ಬಿಸಿಲು

ಮಂಗಳೂರು: ಕಳೆದ ವಾರದಿಂದ ಎಡೆಬಿಡದೇ ಸುರಿಯುತ್ತಿದ್ದ ಮಳೆಗೆ ಕೊಂಚ ಬ್ರೇಕ್ ಬಿದ್ದಿದೆ. ಈ ಮಧ್ಯೆ ವ್ಯಾಪಾರ ವಹಿವಾಟು ಚುರುಕುಗೊಂಡಿದೆ.
ರೆಡ್ ಅಲರ್ಟ್ ಇದ್ದರೂ ನಿನ್ನೆ ಸಂಜೆಯಿಂದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ವಾರದಿಂದ ಈಚೆಗೆ ಜೋರಾಗಿದ್ದ ಮಳೆ ಅಬ್ಬರ ಶನಿವಾರ ಕಡಿಮೆಯಾಗಿದೆ. ಶನಿವಾರ ಬೆಳಿಗ್ಗೆಯಿಂದಲೂ ಬಿಸಿಲಿನಿಂದ ಕೂಡಿದ ವಾತಾವರಣವಿದೆ.