ಜಿ.ಎಚ್.ಎಮ್ ಫೌಂಡೇಶನ್ ಇದರ ವತಿಯಿಂದ ವಿದ್ಯಾರ್ಥಿಗಳ ವಾರ್ಷಿಕ ಕಾಲೇಜು ಶುಲ್ಕ ವಿತರಣೆ ಚೆಕ್ ಹಸ್ತಾಂತರ

ಜಿ.ಎಚ್.ಎಮ್ ಫೌಂಡೇಶನ್ (ರಿ) ಮೂಲರಪಟ್ಣ ಇದರ ವತಿಯಿಂದ ಸರಕಾರಿ ಪದವಿಪೂರ್ವ ಕಾಲೇಜು ಮುತ್ತೂರು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ವಾರ್ಷಿಕ ಕಾಲೇಜು ಶುಲ್ಕವನ್ನು ಭರಿಸುವ ಸಲುವಾಗಿ ಜಿ.ಎಚ್.ಎಮ್ ಫೌಂಡೇಶನ್ (ರಿ) ಇದರ ಅಧ್ಯಕ್ಷ ಮೊಹಮ್ಮದ್ ಶಾಲಿ ಅವರು ಕಾಲೇಜು ಪ್ರಾಂಶುಪಾಲ ರಘುರಾಮ ನಾಯಕ್ ಇವರ ಸಮ್ಮುಖದಲ್ಲಿ ಚೆಕ್ ಹಸ್ತಾಂತರ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಸಂದರ್ಭದಲ್ಲಿ ಜಿ.ಎಚ್.ಎಮ್ ಫೌಂಡೇಶನ್ (ರಿ) ಸ್ಥಾಪಕಾಧ್ಯಕ್ಷ ಹಂಝ ಗುತ್ತು,ಹೀವೆಂಟ್ ಹೆಡ್ ಎಮ್ ಬಿ ಇಸ್ಮಾಯಿಲ್ ಶಾಫಿ, ತೌಹೀದ್ ಎಮ್ ಬಿ,ಮುನೀರ್ ಅಝಾದ್ ನಗರ, ಸನಾವುಲ್ಲ ಎಮ್ ಟಿ ಮುಂತಾದವರು ಉಪಸ್ಥಿತರಿದ್ದರು.