March 17, 2026

ಮಂಗಳೂರು: ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ವಿದ್ಯಾರ್ಥಿನಿ ಮೃತ್ಯು

0
image_editor_output_image710615787-1721372015877

ಮಂಗಳೂರು : ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿದ ಘಟನೆ ಗುರುಪುರ ಎಂಬಲ್ಲಿ ನಡೆದಿದೆ.

ಆಶ್ನಿ (21) ಮೃತ ವಿದ್ಯಾರ್ಥಿನಿ.
ಆಶ್ನಿ ತಂದೆಯ ಜೊತೆ ಗದ್ದೆಗೆ ದನ ಕಟ್ಟಲು ಹೋದ ವೇಳೆ ಈ ಘಟನೆ ನಡೆದಿದೆನ್ನಲಾಗಿದೆ.

ಮೊದಲಿಗೆ ಮನೆಯ ಸಾಕು ನಾಯಿಗೆ ವಿದ್ಯುತ್ ಶಾಕ್ ಹೊಡೆದಿದ್ದು, ನಾಯಿ ಹೊರಳಾಡುವುದನ್ನು ನೋಡಿ ರಕ್ಷಣೆಗೆ ಮುಂದಾದ ಆಶ್ನಿ, ತುಂಡಾಗಿ ಬಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!