ಮನೆಯಿಂದ ತೆರಳಿದ್ದ ಯುವಕ ನಾಪತ್ತೆ

ದಾಂಡೇಲಿ : ಸ್ಥಳೀಯ ಗಣೇಶನಗರದ ಅವಿವಾಹಿತ ಯುವಕನೋರ್ವ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದ್ದು, ಈ ಬಗ್ಗೆ ನಗರ ಪೊಲೀಸ್ ಠಾಣೆಯಿಂದ ಮಾಹಿತಿ ಲಭ್ಯವಾಗಿದೆ.
ಖಾಸಗಿ ಕೋರಿಯರ್ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಸ್ಥಳೀಯ ಗಣೇಶನಗರದ ನಿವಾಸಿ 27 ವರ್ಷ ವಯಸ್ಸಿನ ಪ್ರವೀಣ್ ತೆಗ್ಗಿ ಎಂಬಾತನೆ ನಾಪತ್ತೆಯಾದ ಯುವಕನಾಗಿದ್ದಾನೆ.
ಈತ ಜುಲೈ 3 ರಂದು ಯಾವುದೋ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡು ಮನೆ ಬಿಟ್ಟು ಹೋದವನು ಈವರೆಗೆ ಮನೆಗೆ ಬಂದಿಲ್ಲ. ಈತನ ಕುಟುಂಬಸ್ಥರು ಹಾಗೂ ಸ್ನೇಹಿತರು ಆತನನ್ನು ಪತ್ತೆ ಹಚ್ಚಲು ಸಾಕಷ್ಟು ಪ್ರಯತ್ನಿಸಿದರೂ ಯಾವುದೇ ಸುಳಿವೇ ಸಿಕ್ಕಿಲ್ಲ. ಅಂತಿಮವಾಗಿ ಈತನ ತಂದೆ ನಿಂಗಪ್ಪ ಗುರುಪಾದಪ್ಪ ತೆಗ್ಗಿ ಅವರು ಮಗನನ್ನು ಹುಡುಕಿ ಕೊಡುವಂತೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.