February 3, 2026

2 ಕೋಟಿಗೂ ಹೆಚ್ಚು ಮೌಲ್ಯದ ಅಕ್ಕಿ ಕಳ್ಳತನ ಪ್ರಕರಣ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಬಂಧನ

0
n6223458611721143063629d745e310466175af7e128f69b300b1c7ed3534e85578916620a6d5a6b2a5930c.jpg

ಕಲಬುರಗಿ: ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಸರ್ಕಾರಿ ಗೋಧಾವಿನಲ್ಲಿ ಸುಮಾರು 2 ಕೋಟಿಗೂ ಹೆಚ್ಚು ಮೌಲ್ಯದ ಅಕ್ಕಿ ಕಳ್ಳತನ ಪ್ರಕರಣದಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ನನ್ನು ಇದೀಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 2 ಕೋಟಿಗೂ ಹೆಚ್ಚು ಮೌಲ್ಯದ ಸುಮಾರು 6077 ಕ್ವಿಂಟಲ್ ಅಕ್ಕಿ ಕಳ್ಳತನ ಮಾಡಿದ್ದು, ಅಕ್ಕಿ ಕಳ್ಳತನ ಪ್ರಕರಣ ಸಂಬಂಧಪಟ್ಟಂತೆ ಯಾದಗಿರಿ ಜಿಲ್ಲೆಯ ಶಹಪುರ ಸರ್ಕಾರಿ ಗೋದಾಮಿನಲ್ಲಿ ಅಕ್ಕಿ ಕಳ್ಳತನ ಮಾಡಿದ್ದಾನೇ ಎಂಬ ಆರೋಪ ಕೇಳಿ ಬಂದಿತ್ತು.

ಅಕ್ಕಿ ಕಳ್ಳತನ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು. ಶಹಾಪುರ ಪೊಲೀಸರು ಮಣಿಕಂಠ ರಾಠೋಡ್ ಹೆ ನೋಟಿಸ್ ನೀಡಿದ್ದರು. ಆದರೆ ಮಣಿಕಂಠ ರಾಠೋಡ್ ವಿಚಾರಣೆಗೆ ಹಾಜರಾಗಿಲ್ಲ ಹಾಗಾಗಿ ಇಂದು ಕಲಬುರ್ಗಿಯಲ್ಲಿ ಮಣಿಕಂಠ ರಾಠೋಡನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!