May 15, 2026

ರಾತ್ರಿ ಠಾಣೆಗೆ ಕೆಲಸಕ್ಕೆ ತೆರಳುತ್ತಿದ್ದಾಗ ಲಾರಿ ಢಿಕ್ಕಿ: ಕಾನ್ ಸ್ಟೇಬಲ್ ಮೃತ್ಯು

0
image_editor_output_image-1290601877-1720861547088.jpg

ಹೊಸಕೋಟೆ: ತಾಲ್ಲೂಕಿನ ಅನುಗೊಂಡನಹಳ್ಳಿ ಠಾಣೆಯಲ್ಲಿ ಕಾನ್‌ಸ್ಟೆಬಲ್‌ ಆಗಿ ಕೆಲಸ ಮಾಡುತ್ತಿದ್ದ ಬಳ್ಳಾರಿ ಮೂಲದ ದಾದಾವಲಿ (32) ಮಂಗಳವಾರ ರಾತ್ರಿ ಠಾಣೆಗೆ ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಚನ್ನಸಂದ್ರ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಘಟನೆ ಜುಲೈ 11ಕ್ಕೆ ನಡೆದಿದೆ.

ನೀರಿನ ಟ್ಯಾಂಕರ್ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 2020ರಲ್ಲಿ ಪೋಲೀಸ್ ಇಲಾಖೆಗೆ ಸೇರಿದ್ದರು.

ಮೃತರಿಗೆ ತಂದೆ, ತಾಯಿ, ನಾಲ್ವರು ಸೋದರರು, ಪತ್ನಿ ಇದ್ದಾರೆ. ಬುಧವಾರ ಬಳ್ಳಾರಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಡಿವೈಎಸ್‌ಪಿ ಅಣ್ಣಾ ಸಾಹೇಬ್ ಶಂಕರ ಗೌಡ ಪಾಟೀಲ್‌ ಸೇರಿದಂತೆ ತಾಲ್ಲೂಕಿನ ಎಲ್ಲ ಠಾಣೆಗಳ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!