May 5, 2026

30 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದ ಇಬ್ಬರು ಅಧಿಕಾರಿಗಳು

0
image_editor_output_image1388780894-1720387152173.jpg

ಕೋಲಾರ: ಲಂಚ ಪಡೆಯುವ ವೇಳೆ ಇಬ್ಬರು ಸರ್ಕಾರಿ ಅಧಿಕಾರಿಗಳು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲೂಕು ಕಚೇರಿಯಲ್ಲಿ ನಡೆದಿದೆ.

ಭೂ ದಾಖಲೆಗಳ ವಿಭಾಗದ ಸಹಾಯಕ ನಿರ್ದೇಶಕಿ ಅಶ್ವಿನಿ ಹಾಗೂ ಕಂದಾಯ ನಿರೀಕ್ಷಕ ಮಂಜುನಾಥ್ ಎಂಬ ಅಧಿಕಾರಿಗಳು ಲೋಕಾ ಬಲೆಗೆ ಬಿದ್ದಿದ್ದಾರೆ.

ಬಡಾವಣೆ ಭೂ ಪರಿವರ್ತನೆಗಾಗಿ ಲಂಚಕ್ಕೆ ಬೇಡಿಕೆ ಯಿಟ್ಟು ಸ್ವೀಕರಿಸುವಾಗ ಅಧಿಕಾರಿಗಳಿಗೆ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಇಬ್ಬರು ಅಧಿಕಾರಿಗಳು ಹೊಸಕೋಟೆ ಮೂಲದ ಮಹೇಶ್ ಎಂಬುವವರಿಂದ ಹೊಸಕೋಟೆ ಬಳಿ ಬಡಾವಣೆ ಭೂ ಪರಿವರ್ತನೆಗೆ ಲಂಚ ಪಡೆಯುವ ವೇಳೆ ದಾಳಿ ಸಿಕ್ಕಿಬಿದ್ದಿದ್ದಾರೆ.

ಮೊದಲು ಅಶ್ವಿನಿ ಹಾಗೂ ಮಂಜುನಾತ್ 40 ಸಾವಿರಕ್ಕೆ ಬೇಟಿಕೆ ಇಟ್ಟಿದ್ದು, 30 ಸಾವಿರ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

Leave a Reply

Your email address will not be published. Required fields are marked *

error: Content is protected !!