May 6, 2026

ಮಂಗಳೂರು: ಬ್ಯಾಟರಿ, ಕಾಂಪೌಂಡ್‌ನ ಗೇಟ್‌ ಕಳವು ಮಾಡುತ್ತಿದ್ದ ಆರೋಪಿಯ ಬಂಧನ

0
image_editor_output_image1499359372-1720387287994.jpg

ಮಂಗಳೂರು: ಮೂಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್‌ ಟವರ್‌ಗಳ ಬ್ಯಾಟರಿ ಮತ್ತು ಕಾಂಪೌಂಡ್‌ ಗೇಟ್‌ಗಳನ್ನು ಕಳವು ಮಾಡಿದ ಆರೋಪಿಯನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ.

ಕೇರಳ ಕೊಲ್ಲಂನ ಇಟ್ಟಿ ಪನಿಕರ್‌ (58) ಬಂಧಿತ ಆರೋಪಿ. ಈತನಿಂದ ಮೊಬೈಲ್‌ ಟವರ್‌ಗೆ ಸಂಬಂಧಿಸಿದ ಒಟ್ಟು ಅಂದಾಜು 2.56 ಲಕ್ಷ ರೂ. ಮೌಲ್ಯದ 39 ಬ್ಯಾಟರಿಗಳು, ಅಂದಾಜು 52,000 ರೂ. ಮೌಲ್ಯದ 3 ಕಬ್ಬಿಣದ ಗೇಟ್‌ಗಳು, ಅಂದಾಜು 5 ಲಕ್ಷ ರೂ. ಮೌಲ್ಯದ ಪಿಕಪ್‌ ಗೂಡ್ಸ್‌ ಟೆಂಪೊ ಸೇರಿದಂತೆ 8.08 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!