March 17, 2026

ವರದಕ್ಷಿಣೆ ನೀಡುವಂತೆ ಕಿರುಕುಳ: ನವವಿವಾಹಿತೆ ಟೆಕ್ಕಿ ಆತ್ಮಹತ್ಯೆ

0
image_editor_output_image1762131956-1720170136580.jpg

ಬೆಂಗಳೂರು: ಎರಡು ವರ್ಷದ ಹಿಂದೆ ಮದುವೆಯಾಗಿದ್ದ ಟೆಕ್ಕಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಗಂಗಮ್ಮನ ಗುಡಿಯಲ್ಲಿ ನಡೆದಿದೆ.

ಪೂಜಾ(22) ಆತ್ಮಹತ್ಯೆ ಶರಣಾದ ವಿವಾಹಿತೆ. ಪೂಜಾ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಸುನೀಲ್ ಎಂಬಾತನನ್ನು ಪೂಜಾ ಮದುವೆಯಾಗಿದ್ದರು.

ಮದುವೆಯಾದ ಬಳಿಕ ವರದಕ್ಷಿಣೆಗಾಗಿ ಪತಿ ಪೀಡಿಸುತ್ತಿದ್ದ. ಇದರಿಂದ ಮನನೊಂದು ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಗಳ ಸಾವಿಗೆ ಪತಿ ಸುನೀಲ್ ಹಾಗೂ ಮೈದುನ ಅನಿಲ್ ಕಾರಣ ಎಂದು ಪೂಜಾ ಪೋಷಕರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!