May 6, 2026

ಮುಲ್ಕಿ: ಮನೆಯ ಹಿಂಬಾಗಿಲಿನ ಲಾಕ್ ಮರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು

0
image_editor_output_image-1064364591-1720159445045.jpg

ಮುಲ್ಕಿ: ಮನೆಮಂದಿ ಒಳಗಿದ್ದಾಗಲೇ, ಮನೆಗೆ ನುಗ್ಗಿ ನಗ ನಗದು ಕಳವುಗೈದ ಘಟನೆ ಮೂಲ್ಕಿ ಠಾಣಾ ವ್ಯಾಪ್ತಿಯ ಬಳ್ಕುಂಜೆ ನೀರಳಿಕೆಯಲ್ಲಿ ಜು.4ರ ಮುಂಜಾನೆ ನಡೆದಿದೆ.

ಬಳ್ಕುಂಜೆ ನೀರಳಿಕೆ ನಿವಾಸಿ ಶೇಖಬ್ಬ ಪತ್ನಿ ಮತ್ತು ಮಕ್ಕಳು ರಾತ್ರಿ ಮಲಗಿದ್ದು ಶೇಖಬ್ಬ ಅವರ ಮಗಳ ಗಂಡ ರಾತ್ರಿ 1.00 ಗಂಟೆಗೆ ಕರೆ ಮಾಡಿದ್ದು ಕರೆ ಸ್ವೀಕರಿಸಿ ಮಲಗಿದ್ದರು. ಆದರೆ, ಆ ಸಂದರ್ಭ ಕಳ್ಳತನ ನಡೆದಿಲ್ಲ.

ಮುಂಜಾನೆ 4.30 ಕ್ಕೆ ಶೇಕಬ್ಬ ಅವರ ಮಗಳು ಶೌಚಾಲಯಕ್ಕೆ ತೆರಳಲು ಏಳುವಾಗ ಘಟನೆ ಬೆಳಕಿಗೆ ಬಂದಿದೆ. ಮನೆ ಮಂದಿ ಮನೆಯ ಚಾವಡಿಯಲ್ಲಿ ಮಲಗಿದ್ದು, ಕಳ್ಳರು ಮನೆಯ ಮುಂಭಾಗದ ಚಿಲಕ ಹಾಕಿ ಹಿಂಬಾಗಿಲಿನ ಬಾಗಿಲ ಒಳಬಾಗದ ಚಿಲಕವನ್ನು ರಾಡ್ ನಿಂದ ಒಡೆದು ಕಳ್ಳರು ಒಳನುಗ್ಗಿದ್ದಾರೆ. ಮನೆಯಲ್ಲಿ ಜಾಲಾಡಿದ್ದಾರೆ.

ಹಾಸಿಗೆಯ ಅಡಿಯಲ್ಲಿ ಕಪಾಟಿನ ಕೀಲಿಕೈ ಇದ್ದು, ಅದರಿಂದ ಕಪಾಟಿನ ಬೀಗ ತೆಗೆದು ಕಪಾಟನ್ನು ಜಾಲಾಡಿ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಸುಮಾರು 5000 ರೂಪಾಯಿ ನಗದು ದೋಚಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ದಳ, ಮುಲ್ಕಿ ಪೋಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!