May 5, 2026

ವಿಠ್ಠಲ್ ಜೇಸಿ ಶಾಲೆಯಲ್ಲಿ ಎಲ್.ಎನ್. ಕೂಡೂರುಗೆ ನುಡಿನಮನ

0
image_editor_output_image868809233-1719920509430

ನೇರ ನಡೆ-ನುಡಿ, ಮೃದು ಸ್ನೇಹಿ,ದಿಟ್ಟ ನಿರ್ಧಾರ ಸದಾ ಸ್ಪೂರ್ತಿಯ ಸೆಲೆ ತುಂಬುವ ಸೂಕ್ಷ್ಮ ದೃಷ್ಟಿಕೋನದ ಅಭಿವೃದ್ಧಿಯ ಹರಿಕಾರ, ಶಿಕ್ಷಣತಜ್ಞ ವಿಠ್ಠಲ್ ಜೇಸಿ ಆಂಗ್ಲ ಮಾಧ್ಯಮ ಶಾಲೆಯ ಹುಟ್ಟಿಗೆ ಕಾರಣರಾಗಿ
ಸಂಸ್ಥೆಯನ್ನು ಜಾಗತಿಕ ಮಟ್ಟಕ್ಕೆ ತಲುಪಿಸಲು ಹಗಲಿರುಳು ಶ್ರಮಿಸುತಿದ್ದ ಎಲ್.ಎನ್. ಕೂಡೂರುರವರ ಅಕಾಲಿಕ ನಿಧನಕ್ಕೆವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಜೇಸಿ ಪೆವಿಲಿಯನ್ ನಲ್ಲಿ ಆಡಳಿತ ಮಂಡಳಿ,‌ ಆಡಳಿತಾಧಿಕಾರಿ, ಪ್ರಾಂಶುಪಾಲರು, ಉಪ ಪ್ರಾಂಶುಪಾಲೆ, ಶಿಕ್ಷಕರು, ಶಿಕ್ಷಕೇತರ ವರ್ಗ,ಪೋಷಕರು,ವಿದ್ಯಾರ್ಥಿಗಳ ವತಿಯಿಂದ ಮಂಗಳವಾರ ನುಡಿ ನಮನದೊಂದಿಗೆ ಶ್ರದ್ದಾoಜಲಿ ಸಲ್ಲಿಸಲಾಯಿತು.
ಎಲ್.ಎನ್.ಕೂಡೂರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಹಕಾರಿ, ಕೃಷಿ ಕ್ಷೇತ್ರದಲ್ಲಿ ನಡೆದ ಹಾದಿ, ಸಾಧನೆ, ಸೇವಾ ಕಾರ್ಯಗಳನ್ನು ನುಡಿ ನಮನದ ಮೂಲಕ ನೆನಪಿಸಿ ಕೊಳ್ಳಲಾಯಿತು.


ಆಡಳಿತ ಮಂಡಳಿ ಉಪಾಧ್ಯಕ್ಷ ಡಿ. ಶ್ರೀಧರ ಶೆಟ್ಟಿ, ಕಾರ್ಯದರ್ಶಿಗಳಾದ ಮೋಹನ ಎ., ಕೋಶಾಧಿಕಾರಿ ಪ್ರಭಾಕರ ಶೆಟ್ಟಿ, ಜೊತೆ ಕಾರ್ಯದರ್ಶಿ ಶ್ರೀಪ್ರಕಾಶ್ ಕುಕ್ಕಿಲ, ನಿರ್ದೇಶಕರಾದ ಹಸನ್ ವಿಟ್ಲ, ಗೋಕುಲ್ ಸೇಠ್, ವಿಜಯ ಪಾಯಿಸ್, ವಿಟ್ಲ ಜೆಸಿಐ ಕ್ಲಬ್ ಅಧ್ಯಕ್ಷ ಸಂತೋಷ್ ಶೆಟ್ಟಿ ಶ್ರದ್ಧಾಂಜಲಿ ಸಲ್ಲಿಸಿದರು.
ಶಾಲಾ ಪ್ರಾಂಶುಪಾಲ ಜಯರಾಮ ರೈ, ಆಡಳಿತಾಧಿಕಾರಿ ರಾಧಾಕೃಷ್ಣ ಎ., ಉಪ ಪ್ರಾಂಶುಪಾಲೆ ಜ್ಯೋತಿ ಶೆಣೈ , ಸಹ ಶಿಕ್ಷಕರಾದ ಐಡಾ, ಕವಿತಾ, ದೇವಿಕಾ, ಜಯಶ್ರೀ, ಸವಿತಾ, ವಿದ್ಯಾರ್ಥಿಗಳು ಪುಷ್ಪಾರ್ಚನೆ ಸಹಿತ ನುಡಿನಮನ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!