May 5, 2026

ಚಿಕ್ಕಮಗಳೂರು: ಡೋರ್ ಲಾಕ್ ತುಂಡಾಗಿ ಬಸ್ಸಿನಿಂದ ಹೊರಗೆ ಬಿದ್ದ ಮಹಿಳೆ

0
image_editor_output_image-930804235-1719918417388.jpg

ಚಿಕ್ಕಮಗಳೂರು: ಸರಕಾರಿ ಬಸ್ಸು ಹತ್ತುವ ವೇಳೆ ಡೋರ್ ಲಾಕ್ ತುಂಡಾದ ಪರಿಣಾಮ ಮಹಿಳೆ ಬಸ್ಸಿನಿಂದ ಹೊರಗೆ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಐದಳ್ಳಿ ಗ್ರಾಮದ ಬಳಿ ಮಂಗಳವಾರ ನಡೆದಿರುವುದಾಗಿ ವರದಿಯಾಗಿದೆ.

ಐದಳ್ಳಿ ಗ್ರಾಮದ ಶಕುಂತಲಮ್ಮ ಎಂಬ ಮಹಿಳೆಗೆ ಗಂಭೀರ ಗಾಯಯವಾಗಿದ್ದು ಅವರನ್ನು ಆಲ್ದೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬಸ್ಸು ಚಿಕ್ಕಮಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದು ಶಕುಂತಳಮ್ಮ ಬಾಳೆಹೊನ್ನೂರಿಗೆ ತೆರಳಲು ಬಸ್ ಹತ್ತುವಾಗ ಬಸ್ಸಿನ ಬಾಗಿಲಿನ ಲಾಕ್ ತುಂಡಾಗಿದೆ ಪರಿಣಾಮ ಬಾಗಿಲು ಹಿಡಿದ್ದಿದ್ದ ಮಹಿಳೆ ಏಕಾಏಕಿ ಬಸ್ಸಿನಿಂದ ಹೊರಗೆ ಬಿದ್ದು ಗಾಯಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!