ವಿಟ್ಲ: ಕೊಡಂಗಾಯಿ.ಎಸ್ ಕೆ ಎಸ್ ಎಸ್ ಎಫ್ ಕೊಡಂಗಾಯಿ ಶಾಖೆ ವತಿಯಿಂದ ಇಸ್ಲಾಮಿನ ಮಾಧುರ್ಯ ಕಾರ್ಯಕ್ರಮ.
ವಿಟ್ಲ: ಎಸ್ ಕೆ ಎಸ್ ಎಸ್ ಎಫ್ ಕೇಂದ್ರ ಸಮಿತಿ ನಿರ್ದೇಶನದಂತೆ ಇಸ್ಲಾಮಿನ ಮಾಧುರ್ಯ ಕಾರ್ಯಕ್ರಮ ವು ಕೊಡಂಗಾಯಿ ಶಾಖೆಯಲ್ಲಿ 27-06-2024 ರಂದು ನಡೆಯಿತು.
ಶಾಖಾ ಅಧ್ಯಕ್ಷರಾದ ಹನೀಫ್ ಪಿ ಇವರ ಅದ್ಯಕ್ಷತೆಯಲ್ಲಿ ದ.ಕ.ಜಿಲ್ಲಾ ಧಾರಿಮೀಸ್ ಅಸೋಸಿಯೇಷನ್ ಅಧ್ಯಕ್ಷರಾದ ಕೆ ಬಿ ದಾರಿಮಿ ಉಸ್ತಾದರ ದುಆದೊಂದಿಗೆ ಆರಂಭಿಸಿದ ಕಾರ್ಯಕ್ರಮವನ್ನು ಎಸ್,ಕೆ ಎಸ್, ಎಸ್,ಎಫ್ ಜಿಲ್ಲಾ ಕೌನ್ಸಿಲರ್ ಇಬ್ರಾಹಿಂ ಝೈನಿ ಸ್ವಾಗತಿಸಿ
ಮಂಜೇಶ್ವರ ಮಂಡಲ ಜಂಇಯತುಲ್ ಖುತುಬಾ ಅಧ್ಯಕ್ಷ ರಾದ ಕೆ ಕೆ ಇಸ್ಮಾಯಿಲ್ ಮುಸ್ಲಿಯಾರ್ ಉದ್ಘಾಟಿಸಿ ಇಸ್ಲಾಮಿನ ಮಾಧುರ್ಯ ಎಂಬ ವಿಷಯದ ಕುರಿತು ವಿಷಯ ಮಂಡಿಸಿದರು.
ಉಪಾದ್ಯಕ್ಷ ಸಾಬಿತ್ ಮುಂಬೈ,ಕೋಶಾಧಿಕಾರಿ ಹಮೀದ್ ಟಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಟಿ ಎಂ,ವಿಟ್ಲ ಕ್ಲಸ್ಟರ್ ಅಧ್ಯಕ್ಷ ಹಾರಿಸ್ ಎಸ್ ಕೆ, ಮದ್ರಸತುನ್ನೂರಿಯ ಅಧ್ಯಕ್ಷ ಅಬ್ದುಲ್ ರಹ್ಮಾನ್ ಮೇಲಂಗಡಿ, ಎಂ ಜೆ ಎಂ ಮಾಜಿ ಅಧ್ಯಕ್ಷರಾದ ಎ ಎಂ ಮಹಮ್ಮದ್ ಕುಂಞ,ಇಸ್ಮಾಯಿಲ್ ಅರಫಾ,ಅಝರುದ್ದೀನ್, ಇಬ್ರಾಹಿಂ ಅರಫಾ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕೊನೆಯಲ್ಲಿ ಮೂರು ಸ್ವಲಾತಿನೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.





