ವಿಟ್ಲ ಪೇಟೆಯಲ್ಲಿ ಮೆಹಂದಿ ತರಗತಿ ಶುಭಾರಂಭ

ವಿಟ್ಲ: ವಿಟ್ಲ ಪೇಟೆಯಲ್ಲಿರುವ ಮೋತಿ ಸಿಟಿ ಕಟ್ಟಡದಲ್ಲಿ ಇತ್ತೀಚೆಗೆ ಶುಭಾರಂಭಗೊಂಡ ದಿ ನ್ವಾಲೇಜ್ ಹಬ್ ಟ್ಯೂಷನ್ ಮತ್ತು ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ಜುಲೈ 1ರಂದು ಮೆಹಂದಿ ತರಗತಿ ಶುಭಾರಂಭಗೊಳ್ಳಲಿದೆ.
ಸೆಂಟರ್ ಮಹಿಳಾ ಸ್ನೇಹಿ ಕ್ಲಾಸ್ ರೂಂ ಹೊಂದಿದ್ದು, ಸರ್ಟ್ ಫಿಕೆಟ್ ಸಹಿತ ಮೂರು ತಿಂಗಳ ಮೆಹಂದಿ ಕೋರ್ಸ್ ಇದಾಗಿದೆ. ಪರಿಣಿತ ಶಿಕ್ಷಕಿ ತರಬೇತಿ ನೀಡಲಿದ್ದಾರೆ.
ಕೋರ್ಸ್ ನಲ್ಲಿ ಬೇಸಿಕ್ ಡಿಸೈನ್, ಅರಬಿಕ್ ಡಿಸೈನ್, ದುಬೈ ಡಿಸೈನ್, ರೋಸ್ ಪ್ಯಾಟರ್ನ್, ಟ್ರಡೀಷನಲ್ ಮೆಹಂದಿ, ಬ್ರೈಡಲ್ ಫುಲ್ ಹ್ಯಾಂಡ್ ಮತ್ತು ಲೆಗ್ ಡಿಸೈನ್ ಸಹಿತ ಎಲ್ಲಾ ಲೆಟೆಸ್ಟ್ ಮೆಹಂದಿ ಡಿಸೈನ್ ಕಲಿಸಿಕೊಡಲಿದ್ದಾರೆ. ಜೊತೆಗೆ ಪ್ರೊಜೆಕ್ಟ್ ವರ್ಕ್ ಕೂಡ ಇರಲಿದೆ.
ಮೆಹಂದಿ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ತರಗತಿ ಸಮಯವನ್ನು ನಿಗದಿಪಡಿಸಲಾಗುವುದು. ವಾರದ ಸೋಮವಾರದಿಂದ ಶನಿವಾರದ ವರೆಗೆ ತರಗತಿ ನಡೆಯಲಿದೆ. ತರಗತಿಗೆ ಸೇರಲು ಇಚ್ಚಿಸುವವರು 9980205258, 9880203126 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವಂತೆ ಸೆಂಟರ್ ಪ್ರಕಟನೆ ತಿಳಿಸಿದೆ.