June 22, 2026

ಕ್ರೂಸರ್‌ ಜೀಪ್ ಪಲ್ಟಿ: 15 ಮಂದಿಗೆ ಗಾಯ

0
image_editor_output_image1431235909-1718798350247.jpg

ಮುದ್ದೇಬಿಹಾಳ: ತಾಲೂಕಿನ ಯರಗಲ್ಲ ಮದರಿ ಹತ್ತಿರ ಇರುವ ಶ್ರೀ ಬಾಲಾಜಿ ಸಕ್ಕರೆ ಕಾರ್ಖಾನೆಗೆ ಸಿಬ್ಬಂದಿ ಮತ್ತು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಕ್ರೂಸರ್‌ ಜೀಪ್ ಪಲ್ಟಿಯಾಗಿ 15 ಮಂದಿ ಗಾಯಗೊಂಡಿದ್ದಾರೆ.

ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿರುವ ಘಟನೆ ಕೋಳೂರು ಗ್ರಾಮದ ಆಲಮಟ್ಟಿ ಎಡದಂಡೆ ಕಾಲುವೆಯ ಹತ್ತಿರ ನಡೆದಿದೆ.

ಮುದ್ದೇಬಿಹಾಳದ ಅನೀ ವಡ್ಡರ, ಮುದ್ನಾಳದ ವಿಠ್ಠಲ ನಾವಿ, ಮುಧೋಳದ ಮಲ್ಲಿಕಾರ್ಜುನ ಕುಂಬಾರ ಗಂಭೀರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!