May 6, 2026

ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ನಿಲ್ಲಿಸಿದ್ದ ಬೈಕ್ ಕಳವು: ಪ್ರಯೋಜನಕ್ಕೆ ಬಾರದ ಆಸ್ಪತ್ರೆಯ ಸಿಸಿ ಕ್ಯಾಮಾರ-ಜನಾಕ್ರೋಶ

0
IMG-20240618-WA0003.jpg

ಬಂಟ್ವಾಳ: ಬಂಟ್ವಾಳ ಸರಕಾರಿ ಆಸ್ಪತ್ರೆ ಹೊರಗಡೆ ನಿಲ್ಲಿಸಿದ್ದ ಬೈಕ್ ಕಳವಾಗಿರುವ ಘಟನೆ ನಡೆದಿದೆ. ಅಮ್ಟೂರು ಗ್ರಾಮದ ಕರಿಂಗಾನ ನಿವಾಸಿ ಅಬ್ದುಲ್ ಮನಾಫ್ ಅವರಿಗೆ ಸೇರಿದ ಕೆಎ19 ಇಎಚ್ 9241 ನೋಂದಣಿ ಸಂಖ್ಯೆಯ ಕಪ್ಪು ಬಣ್ಣದ ಬಜಾಜ್ ಪಲ್ಸರ್ ಬೈಕ್ ಕಳವಾಗಿದೆ. ಇವರು ಜೂನ್ 10 ರಂದು ರಾತ್ರಿ ಬಂಟ್ವಾಳ ಸರಕಾರಿ ಆಸ್ಪತ್ರೆ ಹೊರಗಡೆ ನಿಲ್ಲಿಸಿದ್ದರು. ಜೂನ್ 11 ರಂದು ಬೆಳಿಗ್ಗೆ ಬಂದು ನೋಡುವಾಗ ಬೈಕ್ ಕಳವಾಗಿರುವುದು ಬೆಳಕಿಗೆ ಬಂದಿದೆ.

ಕಳವಾಗಿರುವ ಬೈಕಿನ ಅಂದಾಜು ಮೌಲ್ಯ 50 ಸಾವಿರ ರೂಪಾಯಿ ಆಗಿರುತ್ತದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ವ್ಯಕ್ತಿಗಳ ವಾಹನಗಳು ಈ ರೀತಿಯಾಗಿ ಕಳವು ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಆಸ್ಪತ್ರೆಯಲ್ಲಿ ಸಿಸಿ ಕ್ಯಾಮಾರ ಇದ್ದರೂ ಇದರಲ್ಲಿ ಆರೋಪಿಗಳ ಸುಳಿವು ಸ್ಪಷ್ಟವಾಗದೇ ಇರೋದು ಆಸ್ಪತ್ರೆ ಬೇಜಾಬ್ದಾರಿತನಕ್ಕೆ ಇದೊಂದು ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!