March 17, 2026

300 ಅಡಿ ಪ್ರಪಾತಕ್ಕೆ ಬಿದ್ದ ಕಾರು: ಯುವತಿ ಸಾವು

0
image_editor_output_image1024172965-1718702151317.jpg

ಮುಂಬೈ: ಯುವತಿಯೊಬ್ಬಳು ಕಾರನ್ನು ರಿವರ್ಸ್ ತೆಗೆಯುವ ವೇಳೆ ಏಕಾಏಕಿ ವೇಗ ಹೆಚ್ಚಿಸಿದ ಪರಿಣಾಮ ಕಾರು 300 ಅಡಿ ಆಳದ ಕಂದಕಕ್ಕೆ ಬಿದ್ದು ಯುವತಿ ಸಾವನಪ್ಪಿದ ಘಟನೆ ಸುಲಿಭಂಜನ್ ಹಿಲ್ಸ್‌ ಎಂಬಲ್ಲಿ ನಡೆದಿದೆ.

ಮೃತ ಯುವತಿಯನ್ನು ಶ್ವೇತಾ ದೀಪಕ್ ಸುರ್ವಾಸೆ ಎಂದು ಗುರುತಿಸಲಾಗಿದೆ. ಈಕೆ ತನ್ನ ಸ್ನೇಹಿತರೊಂದಿಗೆ ಔರಂಗಾಬಾದ್‌ನಿಂದ ಸುಲಿಭಂಜನ್ ಹಿಲ್ಸ್‌ಗೆ ಪ್ರಯಾಣ ಬೆಳೆಸಿದ್ದರು.

ಮಳೆಗಾಲದಲ್ಲಿ ಈ ಬೆಟ್ಟದಲ್ಲಿ ಪ್ರಕೃತಿ ಸೌಂದರ್ಯ ಸೂಪರ್ ಆಗಿರುವ ಕಾರಣ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.

ಈ ಘಟನೆಯ ವೇಳೆ ಶ್ವೇತಾ ಕಾರನ್ನು ರಿವರ್ಸ್ ತೆಗೆಯಲು ಪ್ರಾರಂಭಿಸಿದ್ದಾರೆ. ಅದನ್ನು ಆಕೆಯ ಗಳೆಯರು ವಿಡಿಯೋ ಮಾಡುತ್ತಿದ್ದು, ಕಂದಕಕ್ಕೆ ಕೇವಲ 50 ಮೀಟರ್ ಅಂತರ ಇರುವಾಗ ಶ್ವೇತಾ ಕಾರಿನ ಕ್ಲಚ್ ಬದಲು ಎಕ್ಸಲೇಟರ್ ತುಳಿದಿದ್ದಾಳೆ.

ಈ ವೇಳೆ ಕಾರು ಏಕಾಏಕಿ ವೇಗ ತೆಗೆದುಕೊಂಡ ಕಾರಣ ಸೀದಾ ಕಂದಕಕ್ಕೆ ಬಿದ್ದಿದೆ. ಸುಮಾರು 300 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಯುವತಿ ಸ್ಥಳದಲ್ಲೆ ಸಾವನಪ್ಪಿದ್ದಾಳೆ.

Leave a Reply

Your email address will not be published. Required fields are marked *

You may have missed

error: Content is protected !!