ಮಿನಿ ಒಲಂಪಿಕ್ ವೆಯ್ಟ್ ಲಿಫ್ಟಿಂಗ್: ವಿಟ್ಲದ ಜೇಸಿ ಶಾಲೆಗೆ ದ್ವಿತೀಯ ತಂಡ ಪ್ರಶಸ್ತಿ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಸಹಯೋಗದಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನವೆಂಬರ್ 14-17 ರವರೆಗೆ ನಡೆದ ಐದನೇ ಮಿನಿ ಕರ್ನಾಟಕ ಕ್ರೀಡಾಕೂಟ 2026 ರಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಬಿ ವಿನೀತ್ ಕುಮಾರ್ 90+ ಕೆಜಿ ವಿಭಾಗದಲ್ಲಿ ಹಾಗೂ ಜಿತಿನ್ ಎಸ್ ಪೂಂಜಾ 60 ಕೆಜಿ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗಳಿಸುವುದರೊಂದಿಗೆ ರಾಷ್ಟೀಯ ಕ್ರೀಡಾಕೂಟಕ್ಕೆ ಅರ್ಹತೆಯನ್ನು ಪಡೆದಿದ್ದಾರೆ.
ಬಿ ಪ್ರಥಮ್ ಗೌಡ 65 ಕೆಜಿ ವಿಭಾಗದಲ್ಲಿ ಬೆಳ್ಳಿ, ಯಶ್ವಿತ್ ಶೆಟ್ಟಿ ಬಿ 55 ಕೆಜಿ ವಿಭಾಗದಲ್ಲಿ ಬೆಳ್ಳಿ, ಮನಸ್ವಿ ಆರ್ ಕೆ 40 ಕೆಜಿ ವಿಭಾಗದಲ್ಲಿ ಬೆಳ್ಳಿ ಹಾಗೂ ದಕ್ಷ ಎನ್ ಕೆ 75+ ಕೆಜಿ ವಿಭಾಗದಲ್ಲಿ ಕಂಚು ಹೀಗೆ ಎರಡು ಚಿನ್ನ, ಮೂರು ಬೆಳ್ಳಿ ಮತ್ತು ಒಂದು ಕಂಚು ಸೇರಿ ಒಟ್ಟು ಆರು ಪದಕಗಳನ್ನು ಪಡೆದು ವಿಟ್ಲದ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ತಂಡ ದ್ವಿತೀಯ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಇವರಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಭಾನುಪ್ರಕಾಶ್ ವಿ ಎ ಅವರು ತರಬೇತಿಯನ್ನು ನೀಡಿರುತ್ತಾರೆ




