March 17, 2026

ಪುತ್ತೂರು: ಮನೆಯಲ್ಲಿದ್ದ ರೆಫ್ರಿಜರೇಟರ್‌ ಸ್ಫೋಟ

0
image_editor_output_image-1612247950-1718701650463.jpg

ಪುತ್ತೂರು: ರೆಫ್ರಿಜರೇಟರ್ ಸ್ಪೋಟಗೊಂಡು ಮನೆಯಲ್ಲಿದ್ದ ಇತರ ವಿದ್ಯುತ್ ಉಪಕರಣಗಳು ಬೆಂಕಿಗಾಹುತಿಯಾದ ಘಟನೆ ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲಿನಲ್ಲಿ ಜೂ.18ರಂದು ಬೆಳಿಗ್ಗೆ ನಡೆದಿದೆ.

ಜಿಡೆಕಲ್ಲು ಸರಕಾರಿ ಕಾಲೇಜು ಸಮೀಪ ಮೋನಪ್ಪ ಪುರುಷ ಎಂಬವರ ಮನೆಯಲ್ಲಿ ಫ್ರಿಡ್ಜ್‌ಸ್ಫೋಟಗೊಂಡು ಅಗ್ನಿ ಅವಘಡ ಸಂಭವಿಸಿದೆ.

ಈ ವೇಳೆ ಮನೆಯಲ್ಲಿ ಯಾರು ಇಲ್ಲದಿದ್ದ ಕಾರಣ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯಿಂದಾಗಿ ಫ್ರಿಡ್ಜ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಮನೆಯಲ್ಲಿದ್ದ ವಿದ್ಯುತ್ ಪರಿಕರಗಳು ಸೇರಿದಂತೆ ಇತರ ಸೊತ್ತುಗಳು ಹಾನಿಗೊಂಡಿದೆ. ಮನೆಗೆ ಅಪಾರ ಪ್ರಮಾಣದ ಹಾನಿಯುಂಟಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!