December 18, 2025

ಪ್ರೇಮ ಪ್ರಕರಣ: ಪ್ರಿಯಕರ ಸಾವು

0
image_editor_output_image1996626656-1718257624847.jpg

ಮುದ್ದೇಬಿಹಾಳ: ಪ್ರೇಮ ಪ್ರಕರಣ ಹಿನ್ನೆಲೆಯಲ್ಲಿ ಪಟ್ಟಣದ ರಾವಜಪ್ಪ ಮದರಿ ಅವರ ಮನೆಯಲ್ಲಿ ಮೇ 26 ರಂದು ಸಂಜೆ ಪೆಟ್ರೋಲ್ ಎರಚಿ ಕೊಲೆಗೆ ಯತ್ನಿಸಿದ ಘಟನೆಯಲ್ಲಿ ಶೇ 70 ರಷ್ಟು ಬೆಂದು ಹೋಗಿದ್ದ ಪ್ರಿಯಕರ ಮುದ್ದೇಬಿಹಾಳ ತಾಲ್ಲೂಕಿನ ಢವಳಗಿ ಗ್ರಾಮದ ರಾಹುಲ್ ರಾಮನಗೌಡ ಬಿರಾದಾರ (25) ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ 12-13 ದಿನಗಳ ನಂತರ ರವಿವಾರ ಸಂಜೆ 4 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾನೆ.

ಈ ಹಿಂದೆ ರಾಹುಲ್ ಬಿರಾದಾರ ಮದರಿ ಕುಟುಂಬದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಎರಡು ಮೂರು ವರ್ಷಗಳ ನಂತರ ಪ್ರೀತಿ ಮುರಿದುಬಿದ್ದರಿಂದ ಯುವತಿ ರಾಹುಲನಿಂದ ದೂರವಾಗಿದ್ದಳು.

ಇದನ್ನು ಸಹಿಸದ ರಾಹುಲ್ ಮೇ 26 ರಂದು ಯುವತಿಯ ಮನೆಗೆ ಏಕಾಂಗಿಯಾಗಿ ಬಂದಿದ್ದಾಗ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದಲಾಗಿದೆ ಎಂದು ಅಂದು ಯುವಕನ ಕುಟುಂಬಸ್ಥರು ಆರೋಪಿಸಿದ್ದರು.

Leave a Reply

Your email address will not be published. Required fields are marked *

error: Content is protected !!