September 27, 2026

ಕುಂದಾಪುರ: ಟಿವಿ, ಹೋಂ ಅಪ್ಲಾಯನ್ಸಸ್‌ ಶೋರೂಂನಲ್ಲಿ ಆಕಸ್ಮಿಕ ಬೆಂಕಿ ಅವಘಡ

0
image_editor_output_image-1001118324-1718182399611.jpg

ಕುಂದಾಪುರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿಯ ಅಂಬಾ ಟಿವಿ ಹಾಗೂ ಹೋಂ ಅಪ್ಲಾಯನ್ಸಸ್‌ ಶೋರೂಂನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ.

ಕೋಟ್ಯಾಂತರ ರೂ. ನಷ್ಟ ಸಂಭವಿಸಿದ ಘಟನೆ ರವಿವಾರ ರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ.

 

ಸುಧಾಕರ ಶೆಟ್ಟಿ ಅವರಿಗೆ ಸೇರಿದ ಮಳಿಗೆ ಇದಾಗಿದ್ದು, ಅಲ್ಲಿ ಇಟ್ಟಿದ್ದ 3 ಲಕ್ಷ ರೂ. ನಗದು ಸಹಿತ ಎಲ್ಲ ಹಾನಿಯಾದ ಸೊತ್ತುಗಳೆಲ್ಲ ಸೇರಿದಂತೆ ಅಂದಾಜು 1.50 ಕೋ.ರೂ.ಗೂ ಮಿಕ್ಕಿ ನಷ್ಟ ಉಂಟಾಗಿದೆ.

ರವಿವಾರ ರಾತ್ರಿ 8.30ಕ್ಕೆ ಮಳಿಗೆ ಬಂದ್‌ ಮಾಡಿ, ಮನೆಗೆ ಹೋಗಿದ್ದು, ಆ ಬಳಿಕ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ರಾತ್ರಿ 10 ಗಂಟೆಯ ಸುಮಾರಿಗೆ ಘಟನೆ ಬೆಳಕಿಗೆ ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!