March 14, 2026

ಕಾರ್ಕಳ: ಮಗುವಿನ ಜೊತೆಗೆ ತಾಯಿ ನಾಪತ್ತೆ

0
image_editor_output_image1051809996-1718172325829.jpg

ಕಾರ್ಕಳ: ಈದು ಗ್ರಾಮದ ವರಿಮಾರು ದರ್ಖಾಸು ಮನೆ ನಿವಾಸಿ ಶಿವಾನಂದ ಎಂಬವರ ಹೆಂಡತಿ ಅಶ್ವಿನಿ ಎಸ್. (28) ಏಳೂವರೆ ವರ್ಷ ಪ್ರಾಯದ ಮಗುವಿನ ಜೊತೆಗೆ ಕಾಣೆಯಾದ ಕುರಿತು ದೂರು ದಾಖಲಾಗಿದೆ.

ಹೊಸ್ಮಾರು ಅಡಿಕೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಅಶ್ವಿನಿ ಜೂ.11ರಂದು ಮಧ್ಯಾಹ್ನ 2.50ಕ್ಕೆ ಚಿಕ್ಕಮನ ಮಗಳು ರಶ್ಮಿತಾರಲ್ಲಿ ಮಂಗಳೂರಿನಲ್ಲಿರುವ ತಂಗಿ ಮೈನಾಳ ಮಗುವಿಗೆ ಹುಷಾರಿಲ್ಲದೆ ಇದ್ದು ಮಂಗಳೂರಿಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಕಿರಿಯ ಮಗ ಆಶಿಕ್‌ನನ್ನು ಕರೆದುಕೊಂಡು ಹೋದವರು ತಂಗಿಯ ಮನೆಗೂ ಹೋಗದೆ ವಾಪಸ್ಸು ತನ್ನ ಮನೆಗೂ ಬಾರದೆ ಕಾಣೆಯಾಗಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಣೆಯಾದವರ ಮಾಹಿತಿ ಸಿಕ್ಕಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಗೆ ಮಾಹಿತಿಯನ್ನು ತಿಳಿಸಬೇಕಾಗಿ ವಿನಂತಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!