September 27, 2026

ಕಾಪು: ಬಾಲಕಿಯ ಅತ್ಯಾಚಾರ: ಪೊಕ್ಸೊ ಪ್ರಕರಣದ ಆರೋಪಿಯ ಬಂಧನ

0
image_editor_output_image257247178-1718170194754.jpg

ಕಾಪು: ಅಪ್ರಾಪ್ತ ವಯಸ್ಸಿನ ಬಾಲಕಿಯೊಂದಿಗೆ ದೈಹಿಕ ಸಂಪರ್ಕ ನಡೆಸಿ 2 ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಪೋಕ್ಸೋ ಪ್ರಕರಣದ ಆರೋಪಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

ವಿಜಯನಗರ ಜಿಲ್ಲೆಯ ಹಟ್ಟಿ ಚಿರಾತಗುಂದ ನಿವಾಸಿ ಚೇತನ್‌ ಯಾನೆ ತಿಪ್ಪೇಶ್‌ ಬಂಧಿತ ಆರೋಪಿ.

 

ಈತ ಕಳೆದ ವರ್ಷ ಅ.15ರಿಂದ 25ರ ನಡುವಿನ ಅವಧಿಯಲ್ಲಿ ಶಂಕರಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಬಾಲಕಿಯನ್ನು ಪರಿಚಯ ಮಾಡಿಕೊಂಡು ಅತ್ಯಾಚಾರ ಎಸಗಿ ಗರ್ಭಿಣಿಯನ್ನಾಗಿಸಿದ್ದ.

ಎರಡು ತಿಂಗಳ ಬಳಿಕ ಈ ವಿಚಾರ ಮನೆಯವರಿಗೆ ಗೊತ್ತಾಗಿ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!