February 4, 2026

ಕುಂದಾಪುರ: ಟಿವಿ ಸೆಂಟರ್ ಅಗ್ನಿ ಅವಘಡ: ಲಕ್ಷಾಂತರ ಮೌಲ್ಯದ ಸೊತ್ತುಗಳು ನಷ್ಟ

0
n616092076171799130442025128da5460f0a34964c71acf4a60d635fc068a5d0f47b775179638f58cd082b.jpg

ಕುಂದಾಪುರ: ತಾಲೂಕಿನ ತ್ರಾಸಿಯ ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ಅಂಬಾ ಟಿವಿ ಸೆಂಟರ್ ಅಗ್ನಿ ಅವಘಡ ಸಂಭವಿಸಿ ಲಕ್ಷಾಂತರ ಮೌಲ್ಯದ ಸೊತ್ತುಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿರುವ ಬಗ್ಗೆ ವರದಿಯಾಗಿದೆ.

ರವಿವಾರ ರಾತ್ರಿ 10:30ರ ಸುಮಾರಿಗೆ ಸುಧಾಕರ ಶೆಟ್ಟಿ ಮಾಲಿಕತ್ವದ ಅಂಬಾ ಟಿವಿ ಸೆಂಟರ್ ಒಳಗೆ ಸಂಭವಿಸಿದ ಶಾರ್ಟ್ ಸರ್ಕಿಟ್ ನಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಅಂಗಡಿ ಒಳಗೆ ಇದ್ದ ನಗದು 3 ಲಕ್ಷ ರೂ. ಕೂಡ ಸುಟ್ಟು ಹೋಗಿದ್ದು, ಬೆಂಕಿ ಅವಘಡದಿಂದ ಸುಮಾರು 1 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ ಬೈಂದೂರು, ಕುಂದಾಪುರ ಉಡುಪಿಯ ಮೂರು ಅಗ್ನಿಶಾಮಕದಳದ ವಾಹನಗಳು, ಗಂಗೊಳ್ಳಿ ಪೊಲೀಸರು, ಗಂಗೊಳ್ಳಿ ಮೆಸ್ಕಾಂ ಇಲಾಖೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಬೆಂಕಿ ನಂದಿಸಲು ಹರಸಾಸಪಟ್ಟರು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಸಂಪೂರ್ಣ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!