ಅಯೋಧ್ಯೆ ಯಲ್ಲಿ ಬಿಜೆಪಿ ಗೆ ಸೋಲು: ಊರಿನ ಹೆಸರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಅಭಿಮಾನಿ
ಉತ್ತರ ಪ್ರದೇಶ: ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶ್ರೀರಾಮನ ಜನ್ಮಸ್ಥಾನ ಅಯೋಧ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಸೋಲುಂಟಾಗಿದೆ. ಹೀಗಾಗಿ ತಮ್ಮ ಆಕ್ರೋಶವನ್ನು ವಿವಿಧ ರೀತಿಯಲ್ಲಿ ಈಗಾಗಲೇ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಬಿಜೆಪಿ ಸ್ಕಾರ್ಫ್ ಧರಿಸಿದ್ದ ವ್ಯಕ್ತಿಯೊಬ್ಬ ಮಾಡಿರುವ ಕೃತ್ಯದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿವಿಧ ಅಭಿಪ್ರಾಯಗಳಿಗೆ ಕಾರಣವಾಗಿದೆ.
ಈತ ‘ಅಯೋಧ್ಯಾ’ ಎಂದು ನೆಲದ ಮೇಲೆ ಬರೆದಿರುವ ಊರಿನ ಹೆಸರಿಗೆ ಬೆಂಕಿ ಇಟ್ಟಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಪೊಲೀಸರು, ಆತನ ವಿರುದ್ಧ ಕ್ರಮ ಜರುಗಿಸಲು ಪತ್ತೆ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅಯೋಧ್ಯೆ ಜನತೆಗೆ ನಿಂದಿಸಿ ಕೆಲವರು ಪೋಸ್ಟ್ ಹಾಕಿದ್ದರೆ ಮತ್ತೊಬ್ಬ ವ್ಯಕ್ತಿಯಂತೂ ಶ್ರೀರಾಮನನ್ನೇ ನಿಂದಿಸಿದ್ದ. ಇನ್ನು ಕೆಲವರು ತಾವು ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಮಾಡಲು ಬಯಸುವುದಿಲ್ಲವೆಂದು ಹೇಳಿದ್ದರೆ, ಮತ್ತೆ ಹಲವರು ಅಯೋಧ್ಯೆಗೆ ಹೋದರೂ ಸಹ ಅಲ್ಲಿನ ವ್ಯಾಪಾರಿಗಳಿಂದ ಏನನ್ನೂ ಖರೀದಿಸಲು ತಾವು ಬಯಸುವುದಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಸೋಲಿಸಿದ್ದಕ್ಕೆ ಆಕ್ರೋಶ ಹೊರಹಾಕಿದ್ದರು.