March 24, 2026

ಕಟ್ಟಡ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟೆಂಪೋ ಪಲ್ಟಿ: ಓರ್ವ ಕಾರ್ಮಿಕ ಸ್ಥಳದಲ್ಲೇ ಮೃತ್ಯು, 6 ಮಂದಿ ಗಾಯ

0
image_editor_output_image715556095-1717924261645.jpg

ಕಮಲಾಪುರ: ತಾಲ್ಲೂಕಿನ ಡೊಂಗರಗಾಂವ ಕ್ರಾಸ್ ಸಮೀಪದ ರಸ್ತೆಯಲ್ಲಿ ಭಾನುವಾರ ಕಟ್ಟಡ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟೆಂಪೋ ಉರುಳಿ ಬಿದ್ದು ಒಬ್ಬ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.

ಹರಕಂಚಿ ಗ್ರಾಮದಲ್ಲಿ ವಾಸವಿರುವ, ಬಸವಕಲ್ಯಾಣ ತಾಲ್ಲೂಕಿನ ಗಿಲಕಿ ಗ್ರಾಮ ಮೂಲದ ಶಿವಪ್ಪ (35) ಮೃತ ಕಾರ್ಮಿಕ, ನಾಗೂರ ತಾಂಡಾದ ಸಾವನ್ ಗಣೇಶ ಪವಾರ್ ತೀವ್ರ ಗಾಯಗೊಂಡಿದ್ದು, ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಯಕ್ಕಂಚಿ ಗ್ರಾಮದ ಶಶಿಕಲಾ ಜಗದೇವಪ್ಪ ಇಂಗನಕಲ್, ಜಗದೇವಿ ಕಂಟೆಪ್ಪ ಯಳವಂತಗಿ, ಚಾಂದಸಾಬ್‌ ಶೇಖ್‌, ಶಣ್ಮುಖ ಸ್ವಾಮಿ ಹಾಗೂ ರಾಜೇಶ್ರೀ ರಾಘವೇಂದ್ರ ಸಹ ಗಾಯಗೊಂಡು ಕಮಲಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!