July 4, 2026

ವಿಟ್ಲ: ಹೊರೈಝನ್ ಶಾಲೆ,ಶಿಕ್ಷಕ ರಕ್ಷಕ ಸಭೆ

0
IMG-20240608-WA0003.jpg

ವಿಟ್ಲ: ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ ನ ಶಿಕ್ಷಕ – ರಕ್ಷಕ ಸಭೆಯು ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು ಪ್ರಸ್ತಾವನೆ ಮಾಡಿದರು. ಸದರ್ ಉಮರ್ ಸ‌ಅದಿ ದುವಾದ ಮೂಲಕ ಚಾಲನೆ ನೀಡಿದರು.

ಶಾಲೆಯ ಉಪಾಧ್ಯಕ್ಷ ವಿ.ಕೆ.ಎಂ .ಅಶ್ರಫ್, ಕಾರ್ಯದರ್ಶಿ ಕೆ.ಅಬೂಬಕರ್ ವಕೀಲರು ಮತ್ತು ನೋಟರಿ, ಮಸೀದಿ ಕೋಶಾದಿಕಾರಿ ಶರೀಫ್ ಪೊನ್ನೋಟು, ಜತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ, ಟ್ರಸ್ಟಿಗಳಾದ ಅಝೀಝ್ ಸನ, ಇಸಾಕ್ ಸಾಹೇಬ್, ಶೀತಲ್ ಇಕ್ಬಾಲ್, ಅಬ್ದುಲ್ ಹಮೀದ್ ಬದ್ರಿಯಾ, ಇಕ್ಬಾಲ್ ಹಳೆಮನೆ, ಅಬ್ದುಲ್ ರಹಿಮಾನ್ ದೀಪಕ್ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿ ತಸ್ರೀಫ್ ಸ್ವಾಗತಿಸಿದರು. ಇಬ್ತಿಶಾಮ್ ವಂದಿಸಿದರು. ಮಹಮ್ಮದ್ ಶಯಾನ್ ಮತ್ತು ಮರಿಯಮತ್ ರೈಫ ನಿರೂಪಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!