ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ವತಿಯಿಂದ ಹಜ್ ವಾಲೆಂಟೀರ್ ನ ತರಬೇತಿ ಶಿಬಿರ ಮತ್ತು ಕ್ಯಾಪ್ – ಜಾಕೆಟ್ ವಿತರಣೆ
ಜಿದ್ದಾ: ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ಇದರ 2024 ಹಜ್ ವಾಲೆಂಟೀರ್ ನ ತರಬೇತಿ ಶಿಬಿರ ಮತ್ತು ಕ್ಯಾಪ್ – ಜಾಕೆಟ್ ವಿತರಣೆ ಇಂದು ತಾರೀಕು 7/06/2024 ರ ಶುಕ್ರವಾರ ಜಿದ್ದಾ ದ ವಿಲೇಜ್ ರೆಸ್ಟೋರೆಂಟ್ ನಲ್ಲಿ ನಡೆಯಿತು
ಕಳೆದ ವರ್ಷವು IOC ಹಜ್ ವಾಲಂಟೀರ್ ಕಾರ್ಯದಲ್ಲಿ ನೂರಕ್ಕೂ ಹೆಚ್ಚು ಸದಸ್ಯರೊಂದಿಗೆ ಬಹಳ ಅಚ್ಚುಕಟ್ಟಾಗಿ ನಡೆದಿತ್ತು ಅದೇ ರೀತಿ ಈ ವರ್ಷವೂ ಸಹ ಇನ್ನೂರಕ್ಕೂ ಅಧಿಕ ಸದಸ್ಯರೊಂದಿಗೆ ಹಜ್ಜಾಜಿಗಳ ಸೇವೆಗೆ IOC ಯ ವಾಲಂಟೀರ್ ತಂಡ ಸಜ್ಜಾಗಿರುತ್ತದೆ ಎಂದು ತಿಳಿಸಲು ಸಂತೋಷಪಡುತ್ತೇವೆ
ಕಾರ್ಯಕ್ರಮವು ಮೊದಲಿಗೆ ಕಿರಾತ್ ನೊಂದಿಗೆ ನೆರವೇರಿತು.
ಕಿರಾತ್ – ಹಾರಿಸ್ ಬಿಳಗುಳ ನೆರವೇರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ IOC ಯ ಅಧ್ಯಕ್ಷ ಜಾವಿದ್ ಮಿಯಾಂದಾದ್ ರವರು ಭಾಗವಹಿಸಿದ್ದರು.
ಹಾಗೂ ಇಬ್ರಾಹಿಮ್ ಕನ್ನಂಗಾರ್, ಝೀಶಾನ್ ಬಾಳೆಹೊನ್ನೂರು, ಝಾಕಿರ್ ಮಕ್ಕಾ OICC, ಜಲಾಲ್ ಬೇಗ್, ಮೊಹಮ್ಮದ್ ನಾಸಿರ್ ಗುಲ್ಬರ್ಗ, ಝಾಕಿರ್ ಸಕಲೇಶಪುರ ಭಾಗವಹಿಸಿದರು.
ಸಭೆಯುದ್ದಕ್ಕೂ ಮುಖ್ಯ ಅತಿಥಿಗಳು ತಮ್ಮ ಪ್ರಭಾಷಣ ದಲ್ಲಿ
ಅಲ್ಲಾಹನ ಅತಿಥಿಗಳಾಗಿ ಹಜ್ ಗಾಗಿ ಆಗಮಿಸಿರುವ ಹಜ್ಜಾಜಿಗಳಿಗೆ ಸೇವೆ ಮಾಡುವ ರೀತಿ ಗಳ ಬಗ್ಗೆ ಸಂಕ್ಷೀಪ್ತ ವಿವರಣೆ ನೀಡಿದರು. ಎಲ್ಲಾ ಕಾರ್ಯಕರ್ತರಿಗೆ ಜಾಕೆಟ್ – ಟೋಪಿ – ಗುರುತಿನ ಚೀಟಿಗಳನ್ನು ಅಲ್ಲಾಹನ ನಾಮದೊಂದಿಗೆ ವಿತರಿಸಲಾಯಿತು. ಹಜ್ ಹೆಲ್ಪ್ ಡೆಸ್ಕ್ IOC ಯ ಸಹಾಯವಾಣಿಗೆ ಇಕ್ಬಾಲ್ ಗಬ್ಗಲ್, ಇಬ್ರಾಹಿಮ್ ಕನ್ನಂಗಾರ್ ರವರನ್ನು ನೇಮಿಸಲಾಯಿತು. ಜಿದ್ದಾ ದ ಮುಖ್ಯ ಸಂಘಟಕರಾಗಿ ಜಾಸಿಮ್ ಕಲ್ಲಡ್ಕ, ಮುಸ್ತಾಕ್ ಗಬ್ಗಲ್ರರವರನ್ನು ನೇಮಿಸಲಾಯಿತು.
ಬಾಷಾ ವಾಮಂಜೂರ್, ಮುಬಾರಕ್
ಶಾಹುಲ್, ನಾಸಿರ್ ಬಾಳೆಹೊನ್ನೂರು, ಹಾರಿಸ್ ಬಿಳಗುಳ, ರಿಯಾಜ್, ಇಮ್ರಾನ್ ಅಡ್ಡೂರು, ಇಮ್ತಿಯಾಜ್, ಝುಬೈರ್ CKM ರವರನ್ನು ಜಿದ್ದಾ ತಂಡದ ಮುಖ್ಯಸ್ಥರಾಗಿ ನೇಮಿಸಲಾಯಿತು.
ಜಿದ್ದಾದ ಅನಿವಾಸಿ ಭಾರತೀಯ ಸಹೋದರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮದ ಕೊನೆಗೆ ಜಾಸಿಮ್ ಕಲ್ಲಡ್ಕ ಸಭೆಗೆ ಧನ್ಯವಾದ ತಿಳಿಸಿದರು.