July 4, 2026

ವಿಟ್ಲ ಕಮ್ಯುನಿಟಿ ಸೆಂಟರ್ ವತಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆಗೈದ 15 ವಿದ್ಯಾರ್ಥಿಗಳಿಗೆ ಸನ್ಮಾನ

0
IMG-20240608-WA0001.jpg

ವಿಟ್ಲ: ವಿಟ್ಲ ಕಮ್ಯುನಿಟಿ ಸೆಂಟರ್ ವತಿಯಿಂದ ವಿಟ್ಲ ಹೋಬಳಿಯ ಹತ್ತನೇ ತರಗತಿಯಲ್ಲಿ 90% ಅಧಿಕ ಅಂಕ ಪಡೆದ 15 ವಿದ್ಯಾರ್ಥಿಗಳಿಗೆ ಸೆಂಟರ್ ವತಿಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ವಿಟ್ಲದ ಎಂಜಿಆರ್ ಗ್ರೂಪ್ ನ ಮಹಮ್ಮದ್ ರಫೀಕ್, ಜನಾಬ್ ನೌಶೀನ್ ಬದ್ರಿಯಾ, ಜನಾಬ್ ಉಸ್ಮಾನ್ ಪಿಟ್ ಪ್ಯಾಷನ್, ಜನಾಬ್ ಇಮ್ತಿಯಾಜ್ ಪಿಸಿಸಿ, ಜನಾಬ್ ಅಬ್ದುಲ್ ರಝಾಕ್ ಹಾಗೂ ಅಸ್ರ ಅಳಿಕೆ Phd ವಿದ್ಯಾರ್ಥಿ ಯನೋಪೋಯ, ಬುಶ್ರ ಅಳಿಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ವಿದ್ಯಾರ್ಥಿಗಳಿಗೆ ಮುಂದಿನ ಗುರಿಯ ಬಗ್ಗೆ ಜನಾಬ್ ಹನೀಫ್ ಪುತ್ತೂರು ಕೌನ್ಸಿಲಿಂಗ್ ನಡೆಸಿದರು. ನೀಟ್ ಪೂರ್ವ ತಯಾರಿ ಬಗ್ಗೆ ವಾಜಿದ ಮೇಡಮ್ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿಟ್ಲ ಕಮ್ಯುನಿಟಿ ಸೆಂಟರ್ ನ ಶಿಕ್ಷಕಿಯರಾದ ಕುಮಾರಿ ಮುರ್ಷಿದ ಕಬಕ ಮತ್ತು ಬಲ್ಕಿಸ್ ಅಡ್ಯನಡ್ಕ ಉಪಸ್ಥಿತರಿದ್ದರು ಹಾಗೂ ಕುಮಾರಿ ಹಾಪಿಳಾ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು. ನೆರೆದ ಅತಿಥಿಗಳಿಗೆ ಹಾಗೂ ವಿಧ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸೆಂಟರಿನ ಮೇಲ್ವಿಚಾರಕರಾದ ಉಬೈದ್.ಕೆ.ವಿಟ್ಲ ವಂದಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!