February 4, 2026

ಬಾಳೆ ಹಣ್ಣಿನಲ್ಲಿ ಪ್ರಜ್ಞೆತಪ್ಪುವ ಔಷಧ ನೀಡಿ 34 ಮಂಗಗಳ ಮಾರಣಹೋಮ

0
image_editor_output_image1112850942-1717839490896.jpg

ಚಿಕ್ಕಮಗಳೂರು: ಚಿಕ್ಕಮಗಳೂರಿನ ಎನ್‌ಆರ್‌ ಪುರದ ದ್ಯಾವನದಲ್ಲಿ ಮಂಗಗಳ ಮಾರಣಹೋಮ ನಡೆದಿದೆ.

34 ಮಂಗಳನ್ನು ಅಮಾನುಷವಾಗಿ ಕೊಂದು ರಸ್ತೆ ಬದಿಯಲ್ಲಿ ಎಸೆದಿರುವ ಘಟನೆ ವರದಿಯಾಗಿದೆ. ಈ ಹೀನ ಕೃತ್ಯಕ್ಕೆ ಪ್ರಾಣಿಪ್ರಿಯರು ಖಂಡನೆ ವ್ಯಕ್ತಪಡಿಸುತ್ತಿದ್ದು, ಕೃತ್ಯ ಎಸಗಿದವರನ್ನು ಪತ್ತೆಹಚ್ಚಿ ಕಠಿಣ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.

ಬಾಳೆ ಹಣ್ಣಿನಲ್ಲಿ ಪ್ರಜ್ಞೆತಪ್ಪುವ ಔಷಧವಿಟ್ಟಿರುವ ಕಿಡಿಗೇರಿಗಳು, ಮಂಗಗಳ ಪ್ರಜ್ಞೆತಪ್ಪಿಸಿ ಬಳಿಕ ಅವಗಳ ತಲೆಗೆ ಹೊಡೆದು ಸಾಯಿಸಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!