March 24, 2026

ಉಡುಪಿ: ಕೆಸರು ತುಂಬಿದ ರಸ್ತೆಯಿಂದಾಗಿ ಟ್ಯಾಂಕರ್ ಪಲ್ಟಿ

0
image_editor_output_image-982179898-1717829779996.jpg

ಉಡುಪಿ: ಉಡುಪಿ ಸಂತೆಕಟ್ಟೆ ಬಳಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆಗೆ ಟ್ಯಾಂಕರ್ ಲಾರಿಯೊಂದು ರಸ್ತೆ ಬದಿ ಇರುವ ಹೊಂಡಕ್ಕೆ ಉರುಳಿ ಬಿದ್ದ ಘಟನೆ ನಡೆದಿದೆ.

ಸಂತೆಕಟ್ಟೆ ನಿರ್ಮಾಣ ಹಂತದ ಕೆಳಸೇತುವೆ ಪ್ರದೇಶವನ್ನು ಹಾದುಹೋದ ನಂತರ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಟ್ಯಾಂಕರ್ ಚಾಲಕ ಉಡುಪಿಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಮುಚ್ಚಿದ ಸರ್ವಿಸ್‌ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗಿದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಕೆಸರು ತುಂಬಿದ ರಸ್ತೆಯಿಂದಾಗಿ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

Leave a Reply

Your email address will not be published. Required fields are marked *

error: Content is protected !!