February 4, 2026

ಮಂಗಳೂರು: ರಸ್ತೆ ಡಿವೈಡರ್ ಗೆ ಸ್ಕೂಟರ್ ಢಿಕ್ಕಿ: ಕಾವೂರು ನಿವಾಸಿ ಮೃತ್ಯು

0
image_editor_output_image-584182175-1717825987720.jpg

ಮಂಗಳೂರು: ರಸ್ತೆ ಡಿವೈಡರ್ ಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾವೂರು ನಿವಾಸಿ ನಿಶಾಂಕ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.

ಜೂನ್ 6 ರಂದು ರಾತ್ರಿ 11.30ರ ಸುಮಾರಿಗೆ ನಿಶಾಂಕ್ ಸ್ಕೂಟರ್ ನಲ್ಲಿ ಏರ್ಪೋರ್ಟ್ ರಸ್ತೆಯಲ್ಲಿ KPT ಕಡೆಯಿಂದ ಪದವಿನಂಗಡಿ ಕಡೆಗೆ ಹೋಗುತ್ತಿದ್ದಾಗ ಮೇರಿ ಹಿಲ್ ಜಂಕ್ಷನ್ ಬಳಿಯ ನೆಕ್ಸಾ ಶೋರೂಮ್ ಎದುರುಗಡೆ ರಸ್ತೆ ಮಧ್ಯದ ಡಿವೈಡರ್ ಗೆ ಡಿಕ್ಕಿ ಹೊಡೆದು ಅಪಘಾತವಾಗಿತ್ತು.

ಈ ವೇಳೆ ತಲೆ ಹಾಗೂ ಹೊಟ್ಟೆ ಭಾಗಕ್ಕೆ ಗಂಭೀರ ಸ್ವರೂಪದ ಹೊಡೆತ ಬಿದಿದ್ದು, ಚಿಕಿತ್ಸೆಗಾಗಿ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.

Leave a Reply

Your email address will not be published. Required fields are marked *

error: Content is protected !!