ಅಣ್ಣಾಮಲೈ ಚುನಾವಣೆಯಲ್ಲಿ ಸೋತದ್ದಕ್ಕೆ ನಡುರಸ್ತೆಯಲ್ಲಿ ಮೇಕೆಯ ತಲೆ ಕತ್ತರಿಸಿ ಸಂಭ್ರಮ: ವೀಡಿಯೊ ವೈರಲ್

ಚೆನ್ನೈ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಲೋಕಸಭಾ ಚುನಾವಣೆಯಲ್ಲಿ ಸೋತದ್ದಕ್ಕೆ ಡಿಎಂಕೆ ಕಾರ್ಯಕರ್ತರು ಮೇಕೆಯನ್ನು ನಡುರಸ್ತೆಯಲ್ಲಿ ಕೊಂದು ಸಂಭ್ರಮಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಣ್ಣಾಮಲೈ ಫೋಟೋವನ್ನು ಮೇಕೆ ಕತ್ತಿಗೆ ನೇತು ಹಾಕಿ ನಡುರಸ್ತೆಗೆ ತಂದು ಒಂದೇ ಏಟಿಗೆ ತಲೆ ಕತ್ತರಿಸಿ ಡಿಎಂಕೆ ಕಾರ್ಯಕರ್ತರು ಸಂಭ್ರಮಿಸಿದ್ದಾರೆ.
ಬಿಜೆಪಿ ನಾಯಕ ಅಮರ್ ಪ್ರಸಾದ್ ರೆಡ್ಡಿ ಅವರು ಈ ವಿಡಿಯೋವನ್ನು ಅಪ್ಲೋಡ್ ಮಾಡಿ ಮುಖ್ಯಮಂತ್ರಿ ಸ್ಟಾಲಿನ್ ನಿಮಗೆ ನಾಚಿಕೆಯಾಗಬೇಕು. ನಿಮ್ಮ ಅನಾಗರಿಕ ವರ್ತನೆ ಸ್ವೀಕಾರಾರ್ಹವಲ್ಲ. ದಯವಿಟ್ಟು ನಿಮ್ಮಕಾರ್ಯಕರ್ತರಿಗೆ ಕನಿಷ್ಠ ಸಭ್ಯತೆಯನ್ನು ಪ್ರದರ್ಶಿಸಲು ಹೇಳಿ. ತಮಿಳುನಾಡು ಪೊಲೀಸರು ವೀಕ್ಷಕರಾಗುವ ಬದಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ.