April 25, 2026

ಸ್ನೇಹಿತನ ಹುಟ್ಟುಹಬ್ಬಕ್ಕೆಂದು ಹೋಗಿದ್ದ ಯುವಕನನ್ನು ಚಾಕುವಿನಿಂದ ಇರಿದು ಕೊಲೆ

0
image_editor_output_image1415425673-1717673664137.jpg

ಬೆಳಗಾವಿ: ಬರ್ತ್‌ಡೇ ಪಾರ್ಟಿಗೆಂದು ಹೋದ ಯುವಕ ಬರ್ಬರವಾಗಿ ಕೊಲೆಯಾದ ದಾರುಣ ಘಟನೆ ಬೆಳಗಾವಿಯ ಯರಗಟ್ಟಿ ತಾಲೂಕಿನ ನುಗ್ಗಾನಟ್ಟಿ ಗ್ರಾಮದಲ್ಲಿ ನಡೆದಿದೆ.

ಸ್ನೇಹಿತನ ಹುಟ್ಟುಹಬ್ಬಕ್ಕೆಂದು ಹೋಗಿದ್ದ ಯುವಕ ಸ್ನೇಹಿತನಿಂದಲೇ ಚಾಕುವಿನಿಂದ ಇರಿತಕ್ಕೊಳಗಾಗಿ ಸಾವನ್ನಪಪ್ಪಿದ್ದಾನೆ.

ಎಂಎಸ್‌ಡಬ್ಲ್ಯೂ ವ್ಯಾಸಂಗ ಮಾಡುತ್ತಿದ್ದ ಬಸವರಾಜ ಮುದ್ದಣ್ಣವರ್ (23) ಕೊಲೆಯಾದ ಯುವಕ.

ಮಲ್ಲಿಕಾರ್ಜುನ ಎನ್ನುವ ಸ್ನೇಹಿತನ ಹುಟ್ಟುಹಬ್ಬ ಆಚರಣೆ ಹಿನ್ನೆಲೆಯಲ್ಲಿ ನುಗ್ಗಾನಟ್ಟಿ ಗ್ರಾಮದಲ್ಲಿ ನಡೆದ ಪಾರ್ಟಿಗೆ ಯುವಕ ಹೋಗಿದ್ದನು. ಆದರೆ ಬರ್ತ್ಡೇ ಪಾರ್ಟಿಗೆ ಆಗಮಿಸಿದ್ದ ಸ್ನೇಹಿತರ ನಡುವೆ ಗಲಾಟೆ ನಡೆದಿದೆ.

ಈ ವೇಳೆ ಮಾತಿಗೆ ಮಾತು ಬೆಳೆದು ಯುವಕನ ಹೊಟ್ಟೆಗೆ ಚಾಕುವಿನಿಂದ ಇರಿಯಲಾಗಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆ ಅಸುನೀಗಿದ್ದಾನೆ.

Leave a Reply

Your email address will not be published. Required fields are marked *

You may have missed

error: Content is protected !!