ವಿಟ್ಲ: ಜೇಸಿಐ ಆತಿಥ್ಯದಲ್ಲಿ ಮಧ್ಯಂತರ ಸಮ್ಮೇಳನ ತುಂತುರು

ವಿಟ್ಲ: ಜೇಸಿಐ ಆತಿಥ್ಯದಲ್ಲಿ ಜೇಸಿಐ ನ ಮಧ್ಯಂತರ ಸಮ್ಮೇಳನ ತುಂತುರು ವಿಟ್ಲದ ಶತಮಾನೋತ್ಸವ ಸ್ಮರಕ ಭವನ ಸಮುದಾಯ ಭವನದಲ್ಲಿ ನಡೆಯಿತು.
ಬೆಳಿಗ್ಗೆನಿಂದ ಸಂಜೆ ವರೆಗೆ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಕಾಶ್ ಹೆಬ್ರಿ ದಿಕ್ಸೂಚಿ ಭಾಷಣ ಮಾಡಿದರು.
ವಿಟ್ಲ ಜೇಸಿಐ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟೆ ಪೆಲ್ತಡ್ಕ ಸ್ವಾಗತಿಸಿ, ಮಾತನಾಡಿ ಜೇಸಿಐ ಎಲ್ಲ ವಲಯಾಧ್ಯಕ್ಷರ, ಸದಸ್ಯರ ಸಹಕಾರದಿಂದ ಇಲ್ಲಿ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಿದೆ. ಜೇಸಿ ಸಂಸ್ಥೆಯಿಂದ ನಾವು ಸಾಕಷ್ಟು ಕಲಿತಿದ್ದೇವೆ. ಇನ್ನಷ್ಟು ಕಲಿಯಲು ಇದೆ. ಇದರಿಂದಾಗಿ ಇಂತಹ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಿದೆ ಎಂದರು.
ಜೇಸಿಐ ವಲಯಾಧ್ಯಕ್ಷ ಜೇಸಿ ಸೆನೆಟರ್ ಅಡ್ವಕೇಟ್ ಗಿರೀಶ್ ಎಸ್.ಪಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ವಿಟ್ಲ ಜೇಸಿಐ ಘಟಕ ತಮಗೆ ನೀಡಿದ ಆತಿಥ್ಯವನ್ನು ಸಂತೋಷವಾಗಿ ಸ್ವೀಕರಿಸಿ ಈ ಕಾರ್ಯಕ್ರಮ ಯಶಸ್ವಿಯಾಗಿ ಅಚ್ಚುಕಟ್ಟಾಗಿ ಮಾಡಿರುತ್ತಾರೆ. ಸಂತೋಷ್ ಶೆಟ್ಟಿ ಮತ್ತು ಅವರ ತಂಡದ ನಿಸ್ವಾರ್ಥ ಸೇವೆ ಮೆಚ್ಚುವಂತಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜೇಸಿ ವಲಯ ಉಪಾಧ್ಯಕ್ಷ ದೀಪಕ್ ರಾಜ್ ಮಾತನಾಡಿ ಜೇಸಿ ಸಂಸ್ಥೆ ಕೊಟ್ಟಷ್ಟು ಅವಕಾಶ ಬೇರೆ ಯಾವ ಸಂಸ್ಥೆ ಕೊಟ್ಟಿಲ್ಲ. ಜೇಸಿ ಕುಟುಂಬದ ಬಗ್ಗೆ ನನಗೆ ತುಂಬನೇ ಸಹಕಾರಿಯಾಗಿದೆ. ಜೇಸಿ ಮೂಲಕ ಇನ್ನಷ್ಟು ಸೇವೆ ನಡೆಸಲು ನಾನು ಸಿದ್ಧನಿದ್ದೇನೆ ಎಂದರು.
ಜೇಸಿಐ ಪಿಪಿಪಿ ರಾಕೇಶ್ ಕುಂಜೂರು ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿ ಇಲ್ಲಿ ಹಲವಾರು ಮಂದಿ ಪ್ರಶಸ್ತಿ ಪಡೆಯುತ್ತೀರಿ, ಅದನ್ನು ಉಳಿಸಿಕೊಳ್ಳುವ ಕಾರ್ಯ ಮಾಡಬೇಕು. ಪ್ರಶಸ್ತಿ ಪಡೆಯುವುದು ಅದು ಹೆಚ್ಚಿನ ಸಾಧನೆ ಮಾಡಲು ಪ್ರೇರಣೆಯಾಗಿದೆ ಎಂದರು.
ವೇದಿಕೆಯಲ್ಲಿ ಜೇಸಿಐ ವಲಯ 15 ರ ವಲಯ ಉಪಾಧ್ಯಕ್ಷರಾದ ಅಭಿಷೇಕ್ ಜಿ.ಎಂ , ಶಂಕರ್ ರಾವ್, ವಿಘ್ನೇಶ್ ಪ್ರಸಾದ್, ರಾಕೇಶ್ ಹೊಸಬೆಟ್ಟು, ಸನತ್ ಕುಮಾರ್, ಹಾಗೂ ವಲಯ ಕಾರ್ಯದರ್ಶಿಗಳಾದ ಸೌಮ್ಯ ರಾಕೇಶ್, ಮ್ಯಾನೆಜ್ ಮೆಂಟ್ ವಿಭಾಗದ ಅಭಿಲಾಷ್, ಕಾರ್ಯಕ್ರಮ ಸಂಯೋಜಕರಾದ ಅಭಿಷೇಕ್ ಬಲ್ಲಾಲ್, ವಕಯದ ಪ್ರಥಮ ಮಹಿಳೆ ಜೇಸಿ ರಾಜೇಶ್ವರಿ ಹಾಗೂ ವಲಯ 15 ರ ಆಡಳಿತ ಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯದರ್ಶಿ ಮುರಳಿ ಪ್ರಸಾದ್, ಕೋಶಾಧಿಕಾರಿ ಲೂಯಿಸ್ ಮಸ್ಕರೇಂಞಸ್, ಕಾರ್ಯಕ್ರಮ ಸಂಯೋಜಕ ಅಭಿಷೇಕ್ ಬಲ್ಲಾಲ್, ಸ್ವರಾಜ್ ಶೆಟ್ಟಿ, ಹೇಮಲತಾ ಪ್ರದೀಫ್, ರವಿಚಂದ್ರ ಪಾಟಾಲಿ, ಸಿಂಧೂ ಶೆಟ್ಟಿ, ಹೇಮಲತಾ ಕಿಶನ್, ನವೀನ್, ರಾಧಾಕೃಷ್ಣ ಎರುಂಬು, ರಮೇಶ್ ಬಿ.ಕೆ, ಪರಮೇಶ್ವರ ಹೆಗ್ಡೆ, ದೀಕ್ಷಿತ್ , ರಿತೇಶ್ ಶೆಟ್ಟಿ, ಆರ್ತಿಕ್, ಸಂದೀಫ್, ಅರುಣ್, ಸೌಮ್ಯ, ಬಾಲಕೃಷ್ಣ , ಮೋನಪ್ಪ ಗೌಡ, ಕ್ಲೀಪರ್ಡ್, ರಿತೇಶ್ ಶೆಟ್ಟಿ, ಶಿವಾನಿ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಶಾರೀಕಾ, ಅಶ್ವಿನಿ, ದಿನೇಶ್ ಶೆಟ್ಟಿ,
ವಿವಿಧ ಜವಾಬ್ದಾರಿ ನಿಭಾಯಿಸಿದರು.
