ಪುತ್ತೂರು: ಏರಿಕೆಯಾದ ಹೊಳೆಯ ನೀರು: ಸೇತುವೆಯಲ್ಲಿ ಸಿಕ್ಕಿಕೊಂಡ ಪಿಕಪ್ ವಾಹನ

ಪುತ್ತೂರು: ನಿನ್ನೆ ಸಂಜೆ ಸುಬ್ರಹ್ಮಣ್ಯ ಪರಿಸರದಲ್ಲಿ ಸುರಿದ ಭಾರಿ ಮಳೆ ಅವಾಂತರ ಸೃಷ್ಟಿಸಿದೆ.
ಸೇತುವೆ ಮೇಲೆ ಸಂಚರಿಸುತ್ತಿದ್ದ ಪಿಕಪ್ ವಾಹನವೊಂದು ಹಠಾತ ಏರಿಕೆಯಾದ ಹೊಳೆಯ ನೀರಿಗೆ ಸಿಲುಕಿದ ಘಟನೆ ಸುಬ್ರಹ್ಮಣ್ಯ ಸಮೀಪದ ಕಲ್ಮಕಾರಿನಲ್ಲಿ ನಡೆದಿದೆ.
ನಿನ್ನೆ ಸಂಜೆ ಸುಬ್ರಹ್ಮಣ್ಯ ಪರಿಸದಲ್ಲಿ ಬಾರೀ ಮಳೆಯಾಗಿತ್ತು, ಒಂದೇ ಸಮನೆ ಸುರಿದ ಮಳೆಗೆ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಹೊಳೆಯ ನೀರು ಏರಿಕೆಯಾಗಿತ್ತು.
ಈ ನಡುವೆ ಸುಬ್ರಹ್ಮಣ್ಯ ಸಮೀಪದ ಕಲ್ಮಕಾರಿನಲ್ಲಿ ಸುರಿದ ಭಾರೀ ಮಳೆಗೆ ಕಲ್ಮಕಾರು ಹೊಳೆಗೆ ನಿರ್ಮಿಸಲಾದ ಸೇತುವೆ ಮೇಲೆ ಹಠಾತ್ ಪ್ರವಾಹ ಬಂದಿತ್ತು. ಈ ವೇಳೆ ಸೇತುವೆ ದಾಟುತ್ತಿದ್ದ ಪಿಕಪ್ ವಾಹನವೊಂದು ಸಿಕ್ಕಿಹಾಕಿಕೊಂಡಿತ್ತು.