December 16, 2025

ಬ್ರಹ್ಮಾವರ: ಯುವತಿ ನಾಪತ್ತೆ

0
image_editor_output_image144300952-1717059656000.jpg

ಬ್ರಹ್ಮಾವರ: ಹಲುವಳ್ಳಿ ಕೊಂಟಿಬೈಲಿನ ಸುಜಾತಾ ಶೆಟ್ಟಿ (39) ಮೇ 24ರಿಂದ ಕಾಣೆಯಾಗಿದ್ದಾರೆ.

ಸುಮಾರು 16 ವರ್ಷಗಳಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಅವರು ಈ ಹಿಂದೆ ಹಲವು ಬಾರಿ ಮನೆ ಬಿಟ್ಟು ಹೋಗಿ ಸಂಬಂಧಿಕರ ಮನೆಯಲ್ಲಿ ಉಳಿದು 2, 3 ದಿನಗಳ ಅನಂತರ ಮರಳುತ್ತಿದ್ದರು.

ಮೇ 24ರ ಸಂಜೆ ಮನೆಯಿಂದ ಹೋದವರು ಇದುವರೆಗೆ ವಾಪಸಾಗಿಲ್ಲ. ಕಂದು ಬಿಳಿ ಬಣ್ಣದ ಚೂಡಿದಾರ್‌, ಕಂದು ಬಣ್ಣದ ಪ್ಯಾಂಟ್‌ ಧರಿಸಿದ್ದು, ಕಾಲಿನಲ್ಲಿ ಕತ್ತಿಯ ಗಾಯದ ಗುರುತು ಇದೆ. ಇವರ ಕುರಿತು ಮಾಹಿತಿ ದೊರೆತಲ್ಲಿ ಬ್ರಹ್ಮಾವರ ಠಾಣೆ (0820-2561044) ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!