May 6, 2026

ಬೈಕ್, ಬಸ್‌ ನಡುವೆ ಅಪಘಾತ: ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

0
image_editor_output_image668727184-1716796321896.jpg

ಕಲಬುರಗಿ: ಕಮಲಾಪುರ ತಾಲ್ಲೂಕಿನ ಡೊಂಗರಗಾಂವ ಕ್ರಾಸ್ ಸಮೀಪದ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ಬೈಕ್ ಮತ್ತು ಬಸ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ ಮೇಲೆ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಕಿಣ್ಣಿಸಡಕ್ ಗ್ರಾಮದ ಸಮೀರ್ ಜಮೀರ್ ಸಾಬ್ (22), ವಿಶಾಲ ಸಂಜಯಕುಮಾರ ಜಾಧವ (20) ಮತ್ತು ಚಂದ್ರಕಾಂತ ನಿಂಗಪ್ಪ ಹೊಳಕುಂದಿ (23) ಮೃತ ಯುವಕರು. ಈ ಮೂವರು ಸೇರಿ ಬೈಕ್‌ ಮೇಲೆ ಕಮಲಾಪುರಕ್ಕೆ ಬರುತ್ತಿದ್ದರು.

ಕಲಬುರಗಿಯಿಂದ ಹುಮನಾಬಾದ್‌ಗೆ ತೆರಳುತ್ತಿದ್ದ ವಿಜಯಪುರ-ಬಸವಕಲ್ಯಾಣ ಬಸ್‌ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಿಂದ ತೀವ್ರವಾಗಿ ಗಾಯಗೊಂಡು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!