ಬೆಳ್ತಂಗಡಿ: ಸೇತುವೆಯ ತಡೆಗೋಡೆಗೆ ಸರ್ಕಾರಿ ಬಸ್ ಢಿಕ್ಕಿ
ಬೆಳ್ತಂಗಡಿ: ಸೇತುವೆಯ ತಡೆಗೋಡೆಗೆ ಸರ್ಕಾರಿ ಬಸ್ಸೊಂದು ಢಿಕ್ಕಿಯಾಗಿದ್ದು, ಸಂಭವನೀಯ ಭಾರೀ ಅನಾಹುತ ತಪ್ಪಿದ ಘಟನೆ ಬೆಳ್ತಂಗಡಿಯ ಕೊಯ್ಯರು ಬಳಿಯ ಕಾಂತಾಜೆ ಎಂಬಲ್ಲಿ ನಡೆದಿದೆ.
ಬಂದಾರಿನಿಂದ ಹೊರಟು ಕೊಯ್ಯರು ಮಾರ್ಗವಾಗಿ ಬೆಳ್ತಂಗಡಿಗೆ ತೆರಳುತ್ತಿದ್ದ ಸರ್ಕಾರಿ ಬಸ್ ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದಿದೆ. ಈ ಬಸ್ಸಿನಲ್ಲಿ ಸುಮಾರು 25ಕ್ಕೂ ಅಧಿಕ ಮಂದಿ ಪ್ರಯಾಣಿಕರಿದ್ದರು.
ಚಾಲಕ ಅತೀ ವೇಗವಾಗಿ ಬಸ್ ಅನ್ನು ಚಲಾಯಿಸಿದ್ದರ ಪರಿಣಾಮ ಕಾಂತಾಜೆಯ ಕಡಿದಾದ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ಬಸ್ ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದಿದೆ.
ಬಸ್ ಢಿಕ್ಕಿಯಾದ ರಭಸಕ್ಕೆ ತಡೆಗೋಡೆ ಮುರಿದಿದೆ. ಸಂಭವಿಸಬಹುದಾದ ಭಾರೀ ಅನಾಹುತ ತಪ್ಪಿದಂತಾಗಿದೆ.




