ಬಿಲ್ ಪಾಸ್ ಮಾಡಲು ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ
ಪಿರಿಯಾಪಟ್ಟಣ: ಕೆಲಸದ ಬಿಲ್ ಪಾಸ್ ಮಾಡುವ ವಿಚಾರವಾಗಿ ತಮ್ಮ ಕಚೇರಿ ಬಳಿ ಲಂಚ ಪಡೆಯುತ್ತಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಥಮ ದರ್ಜೆ ಸಹಾಯಕ ವಿಜಯ್ ಶಂಕರ್ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ.
ನಟೇಶ್ ಎಂಬ ವ್ಯಕ್ತಿಯ ಬಿಲ್ ಪಾಸ್ ಮಾಡಲು ಆತನಿಂದ ಪಡೆದಿದ್ದ ಚೆಕ್ ಹಿಂತಿರುಗಿಸಲು 30 ಸಾವಿರ ರೂ ಬೇಡಿಕೆ ಇಡಲಾಗಿತ್ತು ಈ ಸಂಬಂಧ ನಟೇಶ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು ಗುರುವಾರ ಪಿರಿಯಾಪಟ್ಟಣದ ತಮ್ಮ ಕಚೇರಿ ಬಳಿ ವಿಜಯ್ ಶಂಕರ್ ದೂರುದಾರ ನಟೇಶ್ ಅವರಿಂದ ಹಣ ಸ್ವೀಕರಿಸುವ ಸಂದರ್ಭ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಎಸ್ಪಿ ಸಜಿತ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ವಿ.ಕೃಷ್ಣಯ್ಯ ಲೋಕಾಯುಕ್ತ ಪೊಲೀಸ್ ಇನ್ಸೆಕ್ಟರ್ ಗಳಾದ ರವಿಕುಮಾರ್, ರೂಪಶ್ರೀ, ಲೋಕೇಶ್ ಹಾಗೂ ಸಿಬ್ಬಂದಿ ಮೋಹನ್ ಗೌಡ, ವೀರಭದ್ರಸ್ವಾಮಿ, ಆಶಾ, ತ್ರಿವೇಣಿ, ಪುಷ್ಪಲತಾ, ದಿನೇಶ್, ಲೋಕೇಶ್, ಪೃಥ್ವಿಷ, ಶೇಖರ್ ಇದ್ದರು.





