May 6, 2026

ಕೆರೆಯಲ್ಲಿ ಈಜಲು ಹೋಗಿದ್ದ 4 ಮಕ್ಕಳು ನೀರುಪಾಲು

0
image_editor_output_image-1145680117-1715853905213.jpg

ಹಾಸನ: ಕೆರೆಯಲ್ಲಿ ಈಜಲು ಹೋಗಿದ್ದ ನಾಲ್ಕು ಮಕ್ಕಳು ನೀರುಪಾಲಾದ ದುರ್ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ದುರಗನಹಳ್ಳಿ ತಿಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ದೊರೆ ಹಾಗೂ ಹೇಮವರ ಪುತ್ರ ಜೀವನ್, ಸೋಮಶೇಖರ್ ಹಾಗೂ ಲತಾ ಅವರ ಪುತ್ರ ಪೃಥ್ವಿ, ಚಂದ್ರು ಹಾಗೂ ಪುಷ್ಪ ಅವರ ಪುತ್ರ ವಿಶ್ವಾಸ್, ಮದಘಟ್ಟದಿಂದ ಬಂದಿದ್ದ ಉಮೇಶ್ ಹಾಗೂ (ಗುಣ) ಅವರ ಪುತ್ರ ಸಾತ್ವಿಕ್ ಮೃತಪಟ್ಟ ದುರ್ದೈವಿಗಳು.

ಸುಮಾರು 8 ರಿಂದ 10 ವರ್ಷದ ಐದು ಮಕ್ಕಳು ಕೆರೆಯಲ್ಲಿ ಈಜಲೆಂದು ಹೋಗಿದ್ದರು. ಐವರು ಮಕ್ಕಳಲ್ಲಿ ನಾಲ್ಕು ಮಂದಿ ನೀರುಪಾಲಾಗಿದ್ದಾರೆ. ಎರಡು ಮಕ್ಕಳ ಮೃತದೇಹ ಸಿಕ್ಕಿದ್ದು, ಇನ್ನೂ ಇಬ್ಬರಿಗಾಗಿ ಅಗ್ನಿ ಶಾಮಕದಳದ ಸಿಬಂದಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಪೊಲೀಸ್ ಸಿಬಂಧಿಗಳು ಸ್ಥಳಕ್ಕೆ ಭೇಟಿ ನೀಡಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!