May 6, 2026

ಬಂಟ್ವಾಳ: ಪಾದಾಚಾರಿಗೆ ಕಾರು ಡಿಕ್ಕಿ : ಪ್ರಕರಣ ದಾಖಲು

0
image_editor_output_image-182089187-1715858211485

ಬಂಟ್ವಾಳ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿ ಓರ್ವರಿಗೆ ಕಾರು ಡಿಕ್ಕಿಯಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ರಾತ್ರಿ ಕಲ್ಲಡ್ಕ – ಕಾಂಞಂಗಾಡ್ ರಸ್ತೆಯಲ್ಲಿ ನಡೆದಿದೆ
ಗೋಳ್ತಮಜಲು ನಿವಾಸಿ ಇಸ್ಮಾಯಿಲ್ ಎಂಬವರಿಗೆ ಗಾಯವಾಗಿದೆ.

ಕಲ್ಲಡ್ಕ ಸಮೀಪದ ಕುಂಟಿಪಾಪು ಎಂಬಲ್ಲಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿದ್ದ ಇಸ್ಮಾಯಿಲ್ ಅವರಿಗೆ ಕಾರು ಚಾಲಕ ಇಬ್ರಾಹಿಂ ಎಂಬವರು ಅತೀ ವೇಗ ಮತ್ತು ನಿರ್ಲಕ್ಷ್ಯತನದಿಂದ ಬಂದು ಡಿಕ್ಕಿ ಹೊಡೆದಿದ್ದಾನೆ.

ಇದರಿಂದ ಗಾಯಗೊಂಡಿದ್ದ ಪಾದಾಚಾರಿ ಇಸ್ಮಾಯಿಲ್ ಅವರನ್ನು ಚಿಕಿತ್ಸೆ ಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಮೆಲ್ಕಾರ್ ಟ್ರಾಫಿಕ್ ಪೊಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!