ವಿಟ್ಲ: ಮೇ 11 ಮತ್ತು 12 ರಂದು ಮಜ್ಲಿಸುನ್ನೂರು ವಾರ್ಷಿಕ ಮತ್ತು ಎರಡು ದಿನಗಳ ಮತ ಪ್ರಭಾಷಣ: ಶಮೀರ್ ದಾರಿಮಿ ಕೊಲ್ಲಂ ಮತ್ತು ಇ.ಪಿ ಅಬೂಬಕ್ಕರ್ ಖಾಸಿಮಿ ಅವರಿಂದ ಪ್ರಭಾಷಣ
ವಿಟ್ಲ: ವಿಟ್ಲ ಕೇಂದ್ರ ಮಸೀದಿ ಮತ್ತು ಜಮಾಅತ್ ಯೂತ್ ವಿಂಗ್ ವತಿಯಿಂದ ಮೇ 11 ಮತ್ತು 12 ರಂದು ಮಜ್ಲಿಸುನ್ನೂರು ವಾರ್ಷಿಕ ಮತ್ತು ಎರಡು ದಿನಗಳ ಮತಪ್ರವಚನ ಕಾರ್ಯಕ್ರಮ ಮೇಗಿನಪೇಟೆ ಕೇಂದ್ರ ಜುಮಾ ಮಸೀದಿಯಲ್ಲಿ ನಡೆಯಲಿದೆ.
ಮೇ 11 ರಂದು ಶಮೀರ್ ದಾರಿಮಿ ಕೊಲ್ಲಂ ಮುಖ್ಯ ಪ್ರಭಾಷಣ ನಡೆಯಲಿದೆ. ಮೇ 12ರ ಭಾನುವಾರ ಅಸ್ಸಯ್ಯದ್ ಇಬ್ರಾಹಿಂ ಬಾತಿಷ್ ತಂಙಳ್ ನೇತೃತ್ವದಲ್ಲಿ ಮಜ್ಲಿಸುನ್ನೂರು ಕಾರ್ಯಕ್ರಮ ನಡೆಯಲಿದ್ದು, ಇ.ಪಿ ಅಬೂಬಕ್ಕರ್ ಖಾಸಿಮಿ ಪತ್ತಾನಪುರಂ ಮುಖ್ಯ ಪ್ರಭಾಷಣ ನಡೆಯಲಿದೆ. ಬಳಿಕ ಅನ್ನದಾನ ನಡೆಯಲಿದೆ.





