May 6, 2026

ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಎರಡು ಕಾರುಗಳ ನಡುವೆ ಅಪಘಾತ: ಕಾರಿನಲ್ಲಿದ್ದ ಇಬ್ಬರಿಗೆ ಗಾಯ

0
image_editor_output_image2022579281-1715335574582.jpg

ಬಂಟ್ವಾಳ: ಬಿ.ಸಿ.ರೋಡಿನ ಎನ್.ಜಿ.ಸರ್ಕಲ್ ಸಮೀಪ ಎರಡು ಕಾರುಗಳ ನಡುವೆ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಮಧ್ಯಾಹ್ನ ವೇಳೆ ನಡೆದಿದೆ.

ನರಿಕೊಂಬು ನಿವಾಸಿ ಸ್ವಾತಿ ಹಾಗೂ ಮೈರನ್ ಪಾದೆ ನಿವಾಸಿ ನವವಿವಾಹಿತ ಸುನಿಲ್ ಗಾಯಗೊಂಡವರು‌.

ಬಂಟ್ವಾಳ ಪಂಜಿಕಲ್ಲುವಿನಿಂದ ನರಿಕೊಂಬು ಕಡೆಗೆ ಹೋಗುತ್ತಿದ್ದ ಕಾರು ಹಾಗೂ ಬಿಸಿರೋಡು ಕಡೆಯಿಂದ ಕಾಮಾಜೆ ಕಡೆಗೆ ಬೈಪಾಸ್ ರಸ್ತೆಗೆ ಸಂಪರ್ಕ ಮಾಡುವ ಜಾಗದಲ್ಲಿ ಅಪಘಾತ ಸಂಭವಿಸಿದೆ.

ಅನಿಲ್ ಎಂಬವರು ಅವರ ಅತ್ತಿಗೆ ಸ್ವಾತಿಯವರನ್ನು‌ಪಂಜಿಕಲ್ಲುವಿನಿಂದ ನರಿಕೊಂಬು ‌ಮನೆಗೆ ಕರೆದುಕೊಂಡು ಬರುವ ಸಂದರ್ಭದಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!