May 6, 2026

ಮಡಿಕೇರಿ: SSLC ವಿದ್ಯಾರ್ಥಿನಿಯ ಭೀಕರ ಹತ್ಯೆ,

0
image_editor_output_image447783024-1715319785401.jpg

ಮಡಿಕೇರಿ: ‌ಕೊಡಗಿನಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯ ಭೀಕರ ಕೊಲೆಯಾಗಿರುವುದು ವರದಿಯಾಗಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ಈ ಅಮಾನುಷ ಕೃತ್ಯ ನಡೆದಿದ್ದು, ವಿದ್ಯಾರ್ಥಿನಿ ತಲೆ ಕತ್ತರಿಸಿ ರುಂಡ-ಮುಂಡ ಬಿಸಾಕಿದ್ದಾರೆ.

ಸೂರ್ಲಬ್ಬಿ ಸರ್ಕಾರಿ ‌ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಏಕೈಕ ವಿದ್ಯಾರ್ಥಿನಿಯಾಗಿದ್ದ ಮೀನಾ, ಪರೀಕ್ಷೆಯಲ್ಲಿ ಪಾಸ್ ಗುವ ಮೂಲಕ ತನ್ನ ಶಾಲೆಗೆ 100% ಫಲಿತಾಂಶ ತಂದು ಕೊಟ್ಟಿದ್ದಳು.

ಬೆಳಗ್ಗೆಯಿಂದಲೂ ತಾನು ಪಾಸಾದ ಖುಷಿಯಲ್ಲಿ ಇದ್ದ ಮೀನಾ, ಶಾಲೆಯತ್ತ ಬಂದು ತೇರ್ಗಡೆಯಾದ ಖುಷಿಯಲ್ಲಿ ಮನೆಗೆ ಹೋಗುತ್ತಿದ್ದಳು. ಇದೇ ಸಂದರ್ಭದಲ್ಲಿ ಆಕೆಯನ್ನು ಅಡ್ಡಗಟ್ಟಿ ಕಿರಾತಕನೋರ್ವ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಅಪ್ರಾಪ್ತ ಬಾಲಕಿಯ ವಿವಾಹ ಮಾಡುವುದಕ್ಕೆ ಪೋಷಕರು ಸಿದ್ಧತೆ ನಡೆಸಿದ್ರು‌ ಎನ್ನಲಾಗಿದೆ. ಈ ವಿಷಯ ಗ್ರಾಮಸ್ಥರ ಗಮನಕ್ಕೆ ಬಂದಿತ್ತು. ಹೀಗಾಗಿ ಸೋಮವಾರಪೇಟೆ ಪೊಲೀಸರಿಂದ ಅಪ್ರಾಪ್ತ ಬಾಲಕಿಯ ಎಂಗೆಜ್‌ಮೆಂಟ್ ತಡೆಯಲಾಗಿತ್ತು ಎನ್ನಲಾಗಿದೆ.

ಇಂದು ಶಾಲೆಗೆ ಹೋಗಿ ಬರುವ ವೇಳೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ಮದುವೆ ಆಗಬೇಕಾಗಿದ್ದ ಯುವಕ ಹತ್ಯೆ ಮಾಡಿರುವ‌ ಶಂಕೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!