ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ನಾಲ್ಕನೇ ಆರೋಪಿಯ ಬಂಧನ
ಹಾಸನ; ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ನಾಲ್ಕನೇ ಆರೋಪಿಯನ್ನು ಬಂಧಿಸಲಾಗಿದೆ.
ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ ನಾಲ್ಕನೇ ಆರೋಪಿ ಸುಳ್ಯದ ಶಾಂತಿನಗರದ ಮಹಮ್ಮದ್ ಮುಸ್ತಾಫ ಎಸ್(43) ಎಂಬಾತನನ್ನು 7 ಗಂಟೆಗೆ ಹಾಸನ ಜಿಲ್ಲೆಯ ಸಕಲೇಶಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಂಗಳೂರು ಎನ್.ಐ.ಎ ಇನ್ಸೆಕ್ಟರ್ ಷಣ್ಮುಂಗಮ್ ನೇತೃತ್ವದಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.




