May 6, 2026

ಪಾರ್ಟಿಯಲ್ಲಿ ಯುವಕನ ಕೊಲೆ

0
image_editor_output_image-146439358-1715238489195.jpg

ಗದಗ: ರಾತ್ರಿ ಪೂರ್ತಿ ಎಣ್ಣೆ ಪಾರ್ಟಿ ಮಾಡಿ ಕೊನೆಗೆ ಜೊತೆಯಲ್ಲಿದ್ದವನನ್ನೇ ಕೊಲೆಗೈದ ಘಟನೆ ಮುಂಡರಗಿ ತಾಲೂಕಿನ ಕೆಹೆಚ್‌ಬಿ ಕಾಲೋನಿಯಲ್ಲಿ ನಡೆದಿದೆ.

ಮೂವರು ಯುವಕರು ನಿರ್ಜನ ಪ್ರದೇಶದಲ್ಲಿ ಗುಂಡು ಪಾರ್ಟಿಯಲ್ಲಿ ತೊಡಗಿದ್ದರು. ಆದರೆ ಅದೇ ದಿನ ಮಧ್ಯರಾತ್ರಿ ಸುಭಾಷ್ ನಾಯಕ(23) ಎಂಬಾತನ ಕೊಲೆಯಾಗಿದೆ.

ಬಾಟಲಿಯಿಂದ ಚುಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಪಾರ್ಟಿಯಲ್ಲಿದ್ದ ಇಬ್ಬರು ಘಟನೆ ಬಳಿಕ ತಲೆಮರಿಸಿಕೊಂಡಿದ್ದಾರೆ. ಈ ಬಗ್ಗೆ ಮಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ. ತಲೆಮರಿಸೊಕೊಂಡವರಿಗೆ ಶೋಧ ಕಾರ್ಯ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!