March 24, 2026

ಮಲ್ಪೆ ಬೀಚ್: ಸಮುದ್ರ ಪಾಲಾಗುತ್ತಿದ್ದ ಇಬ್ಬರು ಯುವಕರ ರಕ್ಷಣೆ

0
image_editor_output_image657493661-1715148622320.jpg

ಉಡುಪಿ: ದೊಡ್ಡ ಅಲೆಗೆ ಸಮುದ್ರ ಪಾಲಾಗುತ್ತಿದ್ದ ಇಬ್ಬರು ಯುವಕರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಮಲ್ಪೆ ಬೀಚ್ ನಲ್ಲಿ ನಡೆದಿದೆ.

ಬಳ್ಳಾರಿ ಕೊಟ್ಟೂರಿನ ಗೋಪಿನಾಥ್ (25) ಮತ್ತು ರಂಗನಾಥ (26) ಎಂಬ ಇಬ್ಬರು ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆರು ಮಂದಿಯ ಯುವಕರ ಗುಂಪು ಸಮುದ್ರಕ್ಕೆ ಬಂದಿದ್ದರು. ಇವರು ಸಮುದ್ರದಲ್ಲಿ ಈಜುತ್ತಿದ್ದಾಗ ಭಾರಿ ಅಲೆಯೊಂದು ತೀರಕ್ಕೆ ಅಪ್ಪಳಿಸಿದೆ. ಪರಿಣಾಮ ಇಬ್ಬರು ಯುವಕರು ಸಮುದ್ರದ ಪಾಲಾಗಿದ್ದಾರೆ. ಬಳಿಕ ಯುವಕರನ್ನು ಜೀವರಕ್ಷಕರು ರಕ್ಷಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!