February 3, 2026

ರಾಜ್ಯದ 14 ಕ್ಷೇತ್ರಗಳಿಗೆ 2ನೇ ಹಂತದ ಮತದಾನ ಆರಂಭ

0
image_editor_output_image1226617155-1715063055908.jpg

ಕಲಬುರಗಿ: ದೇಶ- ನಾಡಿನ ಭವಿಷ್ಯ ರೂಪಿಸುವ ಲೋಕಸಭೆಯ ಎರಡನೇ ಹಂತದ ಮತದಾನಕ್ಕೆ ಅರ್ಧ ರಾಜ್ಯ ಸಜ್ಜಾಗಿದೆ. ರಾಜ್ಯದ 14 ಕ್ಷೇತ್ರ ಒಳಗೊಂಡಂತೆ 93 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ.

ಮತದಾರರ ಬರುವಿಕೆಗೆ ಮತಗಟ್ಟೆಗಳು ಅಣಿಗೊಂಡಿದ್ದು, ಬಿರುಬಿಸಿಲು ನಡುವೆಯೂ ಮತದಾರರು ತಮ್ಮ ಕರ್ತವ್ಯಪ್ರಜ್ಞೆ ಮೆರೆಯುತ್ತಾರೆಂಬ ನಿರೀಕ್ಷೆ ಬಲಗೊಂಡಿದೆ.

ಕರಾವಳಿ, ಮಲೆನಾಡು, ಮಧ್ಯ, ಕಲ್ಯಾಣ ಹಾಗೂ ಕಿತ್ತೂರು ಕರ್ನಾಟಕದ 14 ಕ್ಷೇತ್ರಗಳಲ್ಲಿ ಬಿಜೆಪಿ- ಕಾಂಗ್ರೆಸ್‌ ಮಧ್ಯೆಯೇ ನೇರ ಹಣಾಹಣಿ ಇದೆ. ಶಿವಮೊಗ್ಗ ಮತ್ತು ದಾವಣಗೆರೆಯಲ್ಲಿ ಪಕ್ಷೇತರ ಅಭ್ಯರ್ಥಿ ಪೈಪೋಟಿ ನೀಡುತ್ತಿದ್ದು, ತ್ರಿಕೋನ ಸ್ಪರ್ಧೆಯ ವಾತಾವರಣ ಇದೆ.

Leave a Reply

Your email address will not be published. Required fields are marked *

error: Content is protected !!